ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಎನ್​ಡಿಆರ್​ಫ್ ತಂಡ; ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಮೆಚ್ಚುಗೆಯ ಮಹಾಪೂರ
ನಾಯಿಯನ್ನು ರಕ್ಷಿಸಿದ ಎನ್​ಡಿಆರ್​ಎಫ್​ ತಂಡ

ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಿದ ಎನ್​ಡಿಆರ್​ಫ್ ತಂಡ; ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಮೆಚ್ಚುಗೆಯ ಮಹಾಪೂರ

Edited By: sandhya thejappa

Updated on: Jul 27, 2021 | 11:06 AM

ಎನ್​ಡಿಆರ್​ಫ್ ತಂಡ ಮೊದಲು ರಬ್ಬರ್ ಬೋಟ್ ಮೂಲಕ ನಾಯಿಯಿದ್ದ ಸ್ಥಳವನ್ನು ತಲುಪಿದೆ. ಹೋಟೆಲ್​ನ ರೂಫ್ ಟಾಪ್ ಮೂಲಕ ಧಾವಿಸಿ ತಂಡ ಶ್ವಾನವನ್ನು ರಕ್ಷಿಸಿದೆ.

YouTube video player

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಕಡೆ ಜಲಾವೃತವಾಗಿದೆ. ಮಳೆಯ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ನಡುವೆ ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಶಿರೋಲಿ ಬಳಿ ಹೋಟೆಲ್ ಒಂದರಲ್ಲಿ ನಾಯಿ ಸಿಲುಕಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಶ್ವಾನವನ್ನು ಎನ್​ಡಿಆರ್​ಫ್​ (NDRF) ತಂಡ ರಕ್ಷಿಸಿದೆ. ನೀರಿನ ಮಧ್ಯದಲ್ಲಿದ್ದ ಹೋಟೆಲ್ ಮೇಲೆ ನಾಯಿ ಭಯದಿಂದ ಕುಳಿತಿತ್ತು. ಕೆಳಗೆ ಇಳಿಯಲಾಗದೆ ಒದ್ದಾಡುತ್ತಿತ್ತು. ಆದರೆ ಎನ್​ಡಿಆರ್​ಫ್ ತಂಡ ಆ ನಾಯಿಯನ್ನು ರಕ್ಷಿಸಿದೆ.

ಎನ್​ಡಿಆರ್​ಫ್ ತಂಡ ಮೊದಲು ರಬ್ಬರ್ ಬೋಟ್ ಮೂಲಕ ನಾಯಿಯಿದ್ದ ಸ್ಥಳವನ್ನು ತಲುಪಿದೆ. ಹೋಟೆಲ್​ನ ರೂಫ್ ಟಾಪ್ ಮೂಲಕ ಧಾವಿಸಿ ತಂಡ ಶ್ವಾನವನ್ನು ರಕ್ಷಿಸಿದೆ. ಎನ್​ಡಿಆರ್​ಫ್ ತಂಡದ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ

ಶಿವಮೊಗ್ಗ ಜಿಲ್ಲೆಯಿಂದ ಬಂದ 4 ಮುಖ್ಯಮಂತ್ರಿಗಳೂ ದುರಂತ ನಾಯಕರು; ಯಾರಿಗೂ ಪೂರ್ಣಾವಧಿ ಭಾಗ್ಯವಿಲ್ಲ

ಕಾಲಿಲ್ಲದವ ಮಂಡಿಯ ಮೇಲೆ ಕುಳಿತು ಐ ಲವ್ ಯೂ ಹೇಳಿದ! ಪ್ರೇಯಸಿಯ ಖುಷಿಗೆ ಮಿತಿಯೇ ಇಲ್ಲ

(NDRF team rescued the dog that was caught in flood at Maharashtra)

Loading...
Unable to load recommendations.
Follow Us
TV9 Web

TV9 Kannada

Read More