ಮಿಚಾಂಗ್ ಚಂಡಮಾರುತ: ಚೆನ್ನೈನ ಮನೆಯೊಂದರಲ್ಲಿ ಒಂಟಿಯಾಗಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್

|

Updated on: Dec 06, 2023 | 11:01 AM

ಚಂಡಮಾರುತ ಮಿಚಾಂಗ್ ಸೃಷ್ಟಿಸಿದ ಹಾಲಾಹಲದ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರೂ. 5060 ಕೋಟಿ ತುರ್ತು ಮತ್ತು ಮಧ್ಯಂತರ ನೆರವು ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಪ್ರಾಣ ಕಳೆದುಕೊಂಡಿದ್ದು ಹಲವು ಜನ ಕಣ್ಮರೆಯಾಗಿದ್ದಾರೆ.

ಚೆನ್ನೈ: ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚಂಡಮಾರುತ ಮಿಚಾಂಗ್ (Cyclone Michaung) ದುರ್ಬಲಗೊಂಡಿರುವುದು ನಿಜವಾದರೂ ಅದು ಸೃಷ್ಟಿಸಿದ ಜಲಪ್ರಳಯ (floods), ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಯಿಂದ ಎರಡೂ ರಾಜ್ಯಗಳ ಕರಾವಳಿ ಪ್ರದೇಶಗಳು (coastal areas) ತತ್ತರಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸಿಬ್ಬಂದಿ ಹಗಲಿರುಳೆನ್ನದೆ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ದೃಶ್ಯಗಳಲ್ಲಿ ನೀವು ನೋಡುವ ಹಾಗೆ ಚೆನ್ನೈ ನಗರದ ಜಲಪ್ರಳಯ ಪೀಡಿತ ಪ್ರದೇಶವೊಂದರ ಮನೆಯಲ್ಲ್ಲಿ ನೀಲಿಬಣ್ಣದ ಸೀರೆಯುಟ್ಟಿರುವ ಹಿರಿಯ ಮಹಿಳೆ ಸಿಲುಕಿ ಸಹಾಯ ಯಾಚಿಸುತ್ತಿದ್ದರು. ಎನ್ ಡಿ ಆರ್ ಎಫ್ ತಂಡದ ಸದಸ್ಯರು ಸಕಾಲಕ್ಕೆ ಅಲ್ಲಿಗೆ ಹೋಗಿರದಿದ್ದರೆ ವೃದ್ಧೆಯ ಜೀವಕ್ಕೆ ಅಪಾಯವಿತ್ತೆಂದು ಹೇಳಲಾಗಿದೆ. ಆದರೆ, ಇಂಥ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಕಷ್ಟದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗುವ ವಿಪತ್ತು ನಿರ್ವಹಣಾ ಪಡೆ ಮಹಿಳೆಯನ್ನು ಅವರು ಬೋಟಿಲ್ಲಿ ಸುರಕ್ಷಿತ ಪ್ರದೇಶಕ್ಕೆ ಕರೆತರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ