ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ- ಬ್ರಹ್ಮಾವರ ತಹಶೀಲ್ದಾರ್ ಖಡಕ್ ಎಚ್ಚರಿಕೆ
ನಡೆದಾಡುವ ದಾರಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸ್ಥಳ ಖರೀದಿ ಮಾಡಿದ್ದ ವ್ಯಕ್ತಿ, ಆ ಸ್ಥಳವನ್ನು ದುಬಾರಿ ದರಕ್ಕೆ ಮತ್ತೊಬ್ಬರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಸ್ಥಳ ಪಡೆದವರಲ್ಲಿ ವಿಚಾರಿಸಿದಾಗ ದಾರಿ ನೀಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ಪಂಚಾಯತಿ ವ್ಯಾಪ್ತಿಯ 200ಕ್ಕೂ ಅಧಿಕ ಎಕ್ರೆ ಕೃಷಿ ಭೂಮಿ ಹೊಂದಿರುವ ಪ್ರದೇಶದಲ್ಲಿ ಕೃಷಿಭೂಮಿಯನ್ನು (agriculture) ಪಡೆದು ಅದಕ್ಕೆ ಮಣ್ಣು ತುಂಬಿ ಕೃಷಿಕರ ಬದುಕಿಗೆ ಕೊಳ್ಳಿ ಇಡಲು ಮುಂದಾದ ವ್ಯಕ್ತಿಗಳ ಭೂ ಮಾಫಿಯದ ವಿರುದ್ಧ ಗರಂ ಆದ ಬ್ರಹ್ಮಾವರ ತಹಶಿಲ್ದಾರ್ ( Brahmavar Tahsheeldar) ಶ್ರೀಕಾಂತ್ ಹೆಗ್ಡೆ, ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡುವ ಯಾವುದೇ ಲೇ ಔಟ್ (layout) ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ಗ್ರಾಮದ ಬಿ.ಎನ್. ಶಂಕರ ಪೂಜಾರಿ ಎಂಬವರು ಸ್ಥಳೀಯ ಬಡಪಾಯಿಗಳ ಬಡತನವನ್ನು ದುರುಪಯೋಗ ಮಾಡಿಕೊಂಡು ಅವರಿಂದ ಕಡಿಮೆ ಬೆಲೆಗೆ ಕೃಷಿಭೂಮಿಗಳನ್ನು ಪಡೆದು, ಸುಮಾರು ಮೂರು ಎಕ್ರೆ ಪ್ರದೇಶಕ್ಕೆ ಅನಧಿಕೃತವಾಗಿ ಮಣ್ಣು ತುಂಬಿದರ ಫಲವಾಗಿ ಇತರೆ ನೂರಾರು ಎಕ್ರೆ ಕೃಷಿ ಭೂಮಿಗೆ ಹೋಗುವ ದಾರಿ ಸಹಿತ ನೀರು ಹರಿದು ಹೋಗುವ ಮೂಲಗಳೂ ಮುಚ್ಚಿ ಹೋದ ಕಾರಣ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಆರಂಭದಲ್ಲಿ ನಡೆದಾಡುವ ದಾರಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸ್ಥಳ ಖರೀದಿ ಮಾಡಿದ ವ್ಯಕ್ತಿ, ಆ ಸ್ಥಳವನ್ನು ದುಬಾರಿ ದರಕ್ಕೆ ಮತ್ತೊಬ್ಬರಿಗೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾರೆ. ಸ್ಥಳ ಪಡೆದವರಲ್ಲಿ ವಿಚಾರಿಸಿದಾಗ ದಾರಿ ನೀಡುವ ಬಗ್ಗೆ ಸ್ಥಳ ನೀಡಿದ ಶಂಕರ ಪೂಜಾರಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಸಹಿತ ವಿವಿಧ ಇಲಾಖೆಗಳಿಗೆ ಈ ಬಗ್ಗೆ ಗ್ರಾಮಸ್ಥರು ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ,ಕಂದಾಯ ನಿರೀಕ್ಷಕ ರಾಜ,ವಿ.ಎ ಭರತ್, ಅಭಿವೃದ್ಧಿ ಅಧಿಕಾರಿ ಸತೀಷ್ ನಾಯ್ಕ್, ಪೊಲೀಸ್ ಅಧಿಕಾರಿ ಮಧು ಬಿ.ಇ ಸಹಿತ ಪರ-ವಿರೋಧಿ ಗ್ರಾಮಸ್ಥರು ಆಗಮಿಸಿದ್ದು, ಈ ಸಂದರ್ಭ ಗ್ರಾಮದಲ್ಲೇ ಇದ್ದು ಕೊಂಡು ಹಣಕ್ಕಾಗಿ ಗ್ರಾಮದ ಕೃಷಿಕರ ಬದುಕಿಗೆ ಕೊಳ್ಳಿ ಇಡಲು ಮುಂದಾದ ಶಂಕರ ಪೂಜಾರಿಯವನ್ನು ಗ್ರಾಮಸ್ಥರು ಅಧಿಕಾರಿಗಳ ಸಮ್ಮಖದಲ್ಲೇ ತರಾಟೆಗೆ ತೆಗೆದು ಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ