ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ವಿ ಸೋಮಣ್ಣ ಉಲ್ಟಾ ಹೊಡೆದರು!
ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷನಾಗಲು ತವಕಿಸುತ್ತಿದ್ದರು ಅದರೆ ಪಕ್ಷದ ವರಿಷ್ಠರು, ಒಬ್ಬ ಯುವನಾಯಕನನ್ನು ಆ ಸ್ಥಾನಕ್ಕೆ ನೇಮಕ ಮಾಡಿದ್ದು ಅವರನ್ನು ತೀವ್ರ ಅಸಮಾಧಾನಕ್ಕೀಡು ಮಾಡಿತ್ತು. ಭ್ರಮನಿರಸನಗೊಂಡಿದ್ದ ಅವರು ಬಿಜೆಪಿಗೆ ಬೈ ಹೇಳಿ ಕಾಂಗ್ರೆಸ್ ಕೈ ಹಿಡಿಯುವ ಸುಳಿವು ನೀಡಿದ್ದರು. ಆದರೆ, ಇವತ್ತು ಸಿದ್ದಗಂಗಾ ಮಠದ ಬಳಿ ಅವರ ಮಾತಿನ ವರಸೆಯೇ ಬೇರೆ ಇತ್ತು.
ತುಮಕೂರು: ನಮ್ಮ ರಾಜಕಾರಣಿಗಳು ಆಡೋ ಮಾತುಗಳನ್ನು ನಂಬೋದು ಕಷ್ಟ ಸ್ವಾಮಿ. ಕೆಲ ದಿನಗಳ ಹಿಂದೆ ಕುಟುಂಬ ಸಮೇತರಾಗಿ ಸಿದ್ದಗಂಗಾ ಮಠಕ್ಕೆ (Siddaganga Mutt) ಆಗಮಿಸಿದ್ದ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಅವರಿಗೆ ಮಾಧ್ಯಮ ಪ್ರತಿನಿಧಿಗಳು ಕಾಂಗ್ರೆಸ್ ಸೇರ್ತಿರಾ ಸಾರ್ ಅಂತ ಕೇಳಿದಾಗ, ಡಿಸೆಂಬರ್ 6 ರವರೆಗೆ (December 6 ) ಕಾಯಿರಿ, ಎಲ್ಲ ಹೇಳ್ತೀನಿ ಅಂದಿದ್ದರು. ಇವತ್ತು ಡಿಸೆಂಬರ್ ಮತ್ತು ಸೋಮಣ್ಣ ಮತ್ತೊಮ್ಮೆ ಸಿದ್ದಗಂಗಾ ಮಠಕ್ಕೆ ಬಂದಿದ್ದಾರೆ. ಪತ್ರಕರ್ತರು ಕಳೆದ ಬಾರಿ ಕೇಳಿದ ಪ್ರಶ್ನೆಯನ್ನೇ ಪುನರಾವರ್ತಿಸಿದ ಕೂಡಲೇ ಉಲ್ಟಾ ಹೊಡೆದ ಸೋಮಣ್ಣ; ಆರನೇ ತಾರೀಖು ನಂತರ ಅಂತ ಹೇಳಿದ್ದೆ, ಅರರಂದು ಅಂತ ಅಲ್ಲ ಎಂದರು. ಐದು ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶಗಳು ಅವರು ಮನಸ್ಸು ಬದಲಾಯಿಸಲು ಪ್ರೇರಣೆ ನೀಡಿದ್ದರೂ ಆಶ್ಚರ್ಯವಿಲ್ಲ. ಅವರು ಹೇಳೋದನ್ನು ಕೇಳಿಸಿಕೊಳ್ಳಿ. ಪತ್ರಕರ್ತರಿಗೆ ಅವರು ತಾನು ಕಾಂಗ್ರೆಸ್ ಸೇರಬೇಕೆಂದಿದ್ದ ವಿಚಾರವನ್ನು ಮನಸ್ಸಿನಿಂದ ತೆಗೆದುಬಿಡಿ, ಲಿಂಗೈಕ್ಯ ಡಾ ಶಿವಕುಮಾರ ಸ್ವಾಮಿಯವರ ಪುಣ್ಯಕ್ಷೇತ್ರದಲ್ಲಿದ್ದೀರಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗಾಗಿ ಒಳ್ಳೆಯದನ್ನು ಬೇಡಿಕೊಳ್ಳಿ ಅಂತ ಆಧ್ಯಾತ್ಮದ ಮಾತುಗಳನ್ನಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ