ಡಿಕೆ ಶಿವಕುಮಾರ್ ನನಗೆ ಬೇಕಾದವರು, ರಾಜಕಾರಣ ಮತ್ತು ವೈಯಕ್ತಿಕ ವಿಚಾರಧಾರೆ ವಿಭಿನ್ನ ಆಯಾಮಗಳು: ವಿ ಸೋಮಣ್ಣ, ಬಿಜೆಪಿ ನಾಯಕ
ಶಿವಕುಮಾಮರ್ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದ ಸೋಮಣ್ಣ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಗುತ್ತಿಗೆದಾರರನ್ನು ಅವರು ಮರೆಯಬಾರದು, ಕಾಮಗಾರಿಗಳ ಬಗ್ಗೆ ಅವರಿಗೆ ತಕಾರಾರಿದ್ದರೆ, ಬಿಲ್ ಮೊತ್ತದ ಶೇಕಡ 20-30 ರಷ್ಟು ಮಿಗಿಸಿಕೊಂಡು ಮಿಕ್ಕಿದ್ದನ್ನು ರಿಲೀಸ್ ಮಾಡಲಿ ಎಂದರು
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬಿಜೆಪಿಯಲ್ಲಿ ಕೇವಲ ವೈರಿಗಳಿದ್ದಾರೆ ಅಂತ ಕನ್ನಡಿಗರು ಭಾವಿಸಿದ್ದರು ಮಾರಾಯ್ರೇ. ಆದರೆ ಆ ಪಕ್ಷದಲ್ಲಿ ಅವರ ಬಗ್ಗೆ ಪ್ರೀತಿ-ಗೌರವ-ಆದರ ಉಳ್ಳವರೂ ಇದ್ದಾರೆನ್ನುವುದು ಇವತ್ತು ಗೊತ್ತಾಗಿದೆ. ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಅವರು ಶಿವಕುಮಾರ್ ಬಗ್ಗೆ ಅತ್ಯಂತ ಅಭಿಮಾನದಿಂದ ಮಾತಾಡುತ್ತಾರೆ. ನಗರದಲ್ಲಿದು ಪತ್ರಿಕಾ ಗೋಷ್ಟಿ ನಡೆಸಿದ ಸೋಮಣ್ಣ ತಾನು ಬಿಜೆಪಿ ಪಕ್ಷದಿಂದ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಸೋತರೂ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು (chief minister) ಹೇಳಿದ್ದೆ ಎಂದರು. ಶಿವಕುಮಾರ್ ತನಗೆ ಬೇಕಾದವರು; ರಾಜಕಾರಣ ಬೇರೆ, ವೈಯಕ್ತಿಕ ವಿಚಾರಗಳೇ ಬೇರೆ ಎಂದು ಹೇಳಿದ ಸೋಮಣ್ಣ, ಶಿವಕುಮಾರ್ ಗೆ ಅನುಭವ, ರಾಜಕೀಯ ಚಾಣಾಕ್ಷ್ಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಮಾವೀಯತೆ ಇರುವುದರಿಂದ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದು ಸೋಮಣ್ಣ ಹೇಳಿದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಗುತ್ತಿಗೆದಾರರನ್ನು ಶಿವಕುಮಾರ್ ಮರೆಯಬಾರದು, ಕಾಮಗಾರಿಗಳ ಬಗ್ಗೆ ಅವರಿಗೆ ತಕಾರಾರಿದ್ದರೆ, ಬಿಲ್ ಮೊತ್ತದ ಶೇಕಡ 20-30 ರಷ್ಟು ಮಿಗಿಸಿಕೊಂಡು ಮಿಕ್ಕಿದ್ದನ್ನು ರಿಲೀಸ್ ಮಾಡಲಿ ಎಂದು ಸೋಮಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ