ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಕಿಲ್ಲ, ಯಾರ ಹೆಸರನ್ನೂ ಶಿಫಾರಸ್ಸು ಮಾಡಲ್ಲ: ಪ್ರಕಾಶ್ ಹುಕ್ಕೇರಿ
ತನಗೆ ಫುಟ್ಬಾಲ್ ಆಗೋದು ಇಷ್ಟವಿಲ್ಲ, ಇಲ್ಲಿಂದ ಒದ್ದರೆ ದೆಹಲಿ, ಅಲ್ಲಿಂದ ಒದ್ದರೆ ಇಲ್ಲಿ-ಬೇಕಾಗಿಲ್ಲ, ಶಿಕ್ಷಕರ ಕ್ಷೇತ್ರದ ಸದಸ್ಯನಾಗೇ ಮುಂದುವರಿಯುತ್ತೇನೆ ಎಂದು ಹೇಳಿದ ಹುಕ್ಕೇರಿ ಯಾರ ಹೆಸರನ್ನೂ ಕೂಡ ಶಿಫಾರಸ್ಸು ಮಾಡಲ್ಲ, ಚಿಕ್ಕೋಡಿಯಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಪ್ರಕಾಶ್ ಹುಕ್ಕೇರಿ (Hukkeri) ದೊಡ್ಡ ಹೆಸರು, ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದಾರೆ. 2014ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ (Chikkodi LS constituency) ಲೋಕಸಭೆಗೆ ಆಯ್ಕೆಯಾಗಿದ್ದೂ ಉಂಟು, ಸದ್ಯಕ್ಕೆ ಅವರ ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ (MLC). ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಕಾಶ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ ಕೆಂಡಾಂಡಲರಾದರು. ಹೈಕಮಾಂಡ್ ತನಗೆ ಸ್ಪರ್ಧಿಸಲು ಹೇಳಿದರೂ ಕೇಳಲ್ಲ, ಎಂಪಿಯಾಗಿ ದೆಹಲಿಗೆ ಹೋಗುವುದು ಸುತಾರಾಂ ಇಷ್ಟವಿಲ್ಲ ಎಂದು ತಮ್ಮ ಗಿರಿಜಾ ಮೀಸೆಯಿಂದ ಜನರ ನಡುವೆ ಕೂಡಲೇ ಗುರುತಿಸಲ್ಪಡುವ ಹುಕ್ಕೇರಿ ಹೇಳುತ್ತಾರೆ. ತನಗೆ ಫುಟ್ಬಾಲ್ ಆಗೋದು ಇಷ್ಟವಿಲ್ಲ, ಇಲ್ಲಿಂದ ಒದ್ದರೆ ದೆಹಲಿ, ಅಲ್ಲಿಂದ ಒದ್ದರೆ ಇಲ್ಲಿ-ಬೇಕಾಗಿಲ್ಲ, ಶಿಕ್ಷಕರ ಕ್ಷೇತ್ರದ ಸದಸ್ಯನಾಗೇ ಮುಂದುವರಿಯುತ್ತೇನೆ ಎಂದು ಹೇಳಿದ ಅವರು ಯಾರ ಹೆಸರನ್ನೂ ಕೂಡ ಶಿಫಾರಸ್ಸು ಮಾಡಲ್ಲ, ಚಿಕ್ಕೋಡಿಯಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ