1 ತಿಂಗಳ ಮಗು ಕಳೆದುಕೊಂಡ ತಂದೆ, CM ನಿವಾಸದ ಎದುರು ಏಕಾಂಗಿ ಪ್ರತಿಭಟನೆ
[lazy-load-videos-and-sticky-control id=”vbAs3QRjjWs”] ಬೆಂಗಳೂರು: ಒಂದು ತಿಂಗಳ ಮಗುವಿನ ಅಗಲಿಕೆಯಿಂದ ನೊಂದ ತಂದೆ ಸಿಎಂ ಅಧಿಕೃತ ನಿವಾಸದ ಎದುರು ಏಕಾಂಗಿ ಪ್ರತಿಭಟನೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ. ನೆಲಮಂಗಲದ ನಿವಾಸಿಯಾಗಿರುವ ವೆಂಕಟೇಶ್ ಅವರ ಒಂದು ತಿಂಗಳ ಮಗು ನಿನ್ನೆ ಸಾವನ್ನಪ್ಪಿದೆ. ಇದರಿಂದ ತೀರ ನೋವಿಗೊಳಗಾಗಿದ್ದ ವೆಂಕಟೇಶ್ ಇಂದು ಮಗುವಿನ ಭಾವಚಿತ್ರದೊಂದಿಗೆ ಸಿಎಂ ನಿವಾಸದ ಬಳಿ ಏಕಾಂಗಿ ಪ್ರತಿಭಟನೆ ನೆಡೆಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶ್ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಇದಕ್ಕೂ ಮೊದಲು ವೆಂಕಟೇಶ್ ಸಿಎಂ ಖಾಸಗಿ ನಿವಾಸ […]
[lazy-load-videos-and-sticky-control id=”vbAs3QRjjWs”]
ಬೆಂಗಳೂರು: ಒಂದು ತಿಂಗಳ ಮಗುವಿನ ಅಗಲಿಕೆಯಿಂದ ನೊಂದ ತಂದೆ ಸಿಎಂ ಅಧಿಕೃತ ನಿವಾಸದ ಎದುರು ಏಕಾಂಗಿ ಪ್ರತಿಭಟನೆ ಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ.
ನೆಲಮಂಗಲದ ನಿವಾಸಿಯಾಗಿರುವ ವೆಂಕಟೇಶ್ ಅವರ ಒಂದು ತಿಂಗಳ ಮಗು ನಿನ್ನೆ ಸಾವನ್ನಪ್ಪಿದೆ. ಇದರಿಂದ ತೀರ ನೋವಿಗೊಳಗಾಗಿದ್ದ ವೆಂಕಟೇಶ್ ಇಂದು ಮಗುವಿನ ಭಾವಚಿತ್ರದೊಂದಿಗೆ ಸಿಎಂ ನಿವಾಸದ ಬಳಿ ಏಕಾಂಗಿ ಪ್ರತಿಭಟನೆ ನೆಡೆಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ವೆಂಕಟೇಶ್ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಇದಕ್ಕೂ ಮೊದಲು ವೆಂಕಟೇಶ್ ಸಿಎಂ ಖಾಸಗಿ ನಿವಾಸ ಧವಳಗಿರಿ ಬಳಿ ಪ್ರತಿಭಟನೆ ಮಾಡಿದ್ದರು.
Published On - 2:24 pm, Sat, 18 July 20