ಪಿತೃಪಕ್ಷದಂದು ಖದೀಮನ ಕೈಚಳಕ: ಗುಂಡೇಟು ತಿಂದು ಜೈಲಿಗೆ ಹೋಗಿದ್ದ ಕಳ್ಳ ಮತ್ತೆ ಸಿಕ್ಕಿ ಬಿದ್ದ

[lazy-load-videos-and-sticky-control id=”vJ4V65pUZ7E”] ನೆಲಮಂಗಲ: ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನು ಗಾದೆ ಮಾತಿನಂತೆ ಇಲ್ಲೊಬ್ಬ ಕಳ್ಳ ಪೊಲೀಸರ ಗುಂಡೇಟು ತಿಂದು ಕಾಲು ಪಂಚರ್ ಮಾಡಿಕೊಂಡು ಜೈಲುಪಾಲಾಗಿದ್ದರೂ ಚಾಳಿ ಬಿಡದೆ ಮತ್ತೆ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ನ್ಯಾಯ ಹೇಳಿ ಶಿಕ್ಷೆ ಕೊಡಿಸೋ ವಕೀಲರ ಮನೆಯಲ್ಲೇ ಈ ಖದೀಮ ತನ್ನ ಕೈಚಳಕ ತೋರಿಸಿ ಕಂಬಿ ಹಿಂದೆ ಬಿದ್ದಿದ್ದಾನೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಬಂಧಿತ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸುಭಾಷ್‌ನಗರದ ನಿವಾಸಿ ವಕೀಲ ಹನುಮಂತರಾಯಪ್ಪಇದೇ ತಿಂಗಳ 11 […]

ಪಿತೃಪಕ್ಷದಂದು ಖದೀಮನ ಕೈಚಳಕ: ಗುಂಡೇಟು ತಿಂದು ಜೈಲಿಗೆ ಹೋಗಿದ್ದ ಕಳ್ಳ ಮತ್ತೆ ಸಿಕ್ಕಿ ಬಿದ್ದ
Follow us
ಆಯೇಷಾ ಬಾನು
|

Updated on:Sep 29, 2020 | 3:46 PM

[lazy-load-videos-and-sticky-control id=”vJ4V65pUZ7E”]

ನೆಲಮಂಗಲ: ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅನ್ನು ಗಾದೆ ಮಾತಿನಂತೆ ಇಲ್ಲೊಬ್ಬ ಕಳ್ಳ ಪೊಲೀಸರ ಗುಂಡೇಟು ತಿಂದು ಕಾಲು ಪಂಚರ್ ಮಾಡಿಕೊಂಡು ಜೈಲುಪಾಲಾಗಿದ್ದರೂ ಚಾಳಿ ಬಿಡದೆ ಮತ್ತೆ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ನ್ಯಾಯ ಹೇಳಿ ಶಿಕ್ಷೆ ಕೊಡಿಸೋ ವಕೀಲರ ಮನೆಯಲ್ಲೇ ಈ ಖದೀಮ ತನ್ನ ಕೈಚಳಕ ತೋರಿಸಿ ಕಂಬಿ ಹಿಂದೆ ಬಿದ್ದಿದ್ದಾನೆ. ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಬಂಧಿತ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸುಭಾಷ್‌ನಗರದ ನಿವಾಸಿ ವಕೀಲ ಹನುಮಂತರಾಯಪ್ಪಇದೇ ತಿಂಗಳ 11 ನೇ ತಾರೀಖು ಪಿತೃಪಕ್ಷಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯಲ್ಲೇ ಇದ್ದುಕೊಂಡು ಹೊಂಚುಹಾಕಿದ್ದ ಆರೋಪಿ ಜಯಂತ್ ಹಾಗೂ ಉಮೇಶ್ ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನ ದರೋಡೆ ಮಾಡಿ ಪರಾರಿಯಾಗಿದ್ದರು.

ಗುಂಡೇಟು ತಿಂದರೂ ಬುದ್ಧಿ ಬರಲಿಲ್ಲ: ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಇನ್ಸ್ಪೆಕ್ಟರ್ ಶಿವಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ 9ಕ್ಕಿಂತ ಹೆಚ್ಚು ಠಾಣೆಗೆ ಬೇಕಾಗಿದ್ದ ಆರೋಪಿ ಜಯಂತ್‌ನನ್ನು ಮಾರ್ಚ್ 22 2019 ರಂದು ಬಂಧಿಸುವ ವೇಳೆ ಪೊಲೀಸರ ಮೇಲೆ‌ ಹಲ್ಲೆಗೆ ಯತ್ನಿಸಿದ ಕಾರಣ ಪೊಲೀಸರು ಜಯಂತನ ಕಾಲಿಗೆ ಗುಂಡಿಕ್ಕಿ ಆರೋಪಿಯನ್ನ ಸೆರೆ ಹಿಡಿದು ಜೈಲಿಗಟ್ಟಿದ್ದರು. ಆದ್ರೆ ಬೇಲ್ ಮೇಲೆ ಹೊರಬಂದ ಆರೋಪಿ ಜಯಂತ್ ತನ್ನ ಹಳೆ ಚಾಳಿ ಮುಂದುವರೆಸಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

Published On - 1:38 pm, Tue, 29 September 20

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?