ಅಮೃತಾಗೆ ಫಿಲ್ಮ್ಫೇರ್ ಅವಾರ್ಡ್; ಖುಷಿ ಹೊರಹಾಕಿದ ನೆನಪಿರಲಿ ಪ್ರೇಮ್
ಫಿಲಂಫೇರ್ ದಕ್ಷಿಣ 2024 2024) ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ (ಆಗಸ್ಟ್ 03) ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಪ್ರೇಮ್ ಮಗಳು ಅಮೃತಾಗೆ ಅತ್ಯುತ್ತಮ ಹೊಸ ನಟಿ ಅವಾರ್ಡ್ ಸಿಕ್ಕಿದೆ.
2024ನೇ ಸಾಲಿನ ಫಿಲ್ಮ್ಫೇರ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯ್ರಕ್ರಮದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾಗೆ ಅತ್ಯುತ್ತಮ ಹೊಸ ನಟಿ ಅವಾರ್ಡ್ ಸಿಕ್ಕಿದೆ. ಈ ಬಗ್ಗೆ ಪ್ರೇಮ್ ಅವರಿಗೆ ಖುಷಿ ಇದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಮ್ಮ ಡಾಲಿ ಧನಂಜಯ್ ಹಾಗೂ ಇಡೀ ಟೀಂಗೆ ಧನ್ಯವಾದ ಹೇಳುತ್ತೇನೆ. ಅವಳಿಂದ ಅಭಿನಯ ತೆಗೆಸಿದ್ದಾರೆ. ಅವರ ಆಶೀರ್ವಾದದ ಪ್ರತಿಫಲದಿಂದ ಈ ಅವಾರ್ಡ್ ಸಿಕ್ಕಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ಅವರು. ‘ಟಗರು ಪಲ್ಯ’ ಚಿತ್ರವನ್ನು ಡಾಲಿ ಧನಂಜಯ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು, ನಾಗಭೂಷಣ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 05, 2024 08:07 AM
Latest Videos