ನೀರಿನಲ್ಲಿ ಕೊಚ್ಚಿ ಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನರು!

Updated on: Aug 27, 2026 | 11:17 PM

ನೇಪಾಳದ ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಭಾರಿ ಪ್ರಮಾಣದ ಮಣ್ಣು, ಕಟ್ಟಿಗೆ ಮತ್ತು ಕೆಸರು ಮಿಶ್ರಿತ ನೀರು ವೇಗವಾಗಿ ಹರಿಯುತ್ತಿದೆ. ನೀರಿನ ರಭಸಕ್ಕೆ ಮನೆಗಳಲ್ಲಿದ್ದ ವಸ್ತುಗಳು ಕೊಚ್ಚಿಹೋಗುತ್ತಿವೆ. ಆ ಪ್ರವಾಹದ ನೀರಿಗೆ ಹಾರುವ ಕೆಲವು ಯುವಕರು ಆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಎಲ್​ಪಿಜಿ ಸಿಲಿಂಡರ್​​ಗಳನ್ನು ಎಳೆದುಕೊಂಡು ದಡಕ್ಕೆ ತರುತ್ತಿದ್ದಾರೆ. ಜೀವ ಉಳಿಸಿಕೊಳ್ಳಲಾಗದೆ ನೇಪಾಳದಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿರುವಾಗ ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಹಾರಿ ಸಿಲಿಂಡರ್ ತರುವ ಸಾಹಸ ಬೇಕಿತ್ತಾ? ಎಂಬುದು ನೆಟ್ಟಿಗರ ಪ್ರಶ್ನೆ.

ಕಠ್ಮಂಡು, ಆಗಸ್ಟ್ 27: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು (Nepal Flash Floods) ಸೃಷ್ಟಿಸಿರುವ ಭೀಕರತೆಗೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಹದ ಹರಿಯುವ ರಭಸದ ಕೆಸರು ನೀರು ಮತ್ತು ತ್ಯಾಜ್ಯಗಳ ನಡುವೆಯೂ ಜನರು ತಮ್ಮ ಜೀವವನ್ನು ಪಣಕ್ಕಿಟ್ಟು, ಈಜಿ ಹೋಗಿ ಎಲ್​ಪಿಜಿ ಸಿಲಿಂಡರ್‌ಗಳನ್ನು ಎಳೆದುಕೊಂಡು ಬರುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ನೇಪಾಳದ ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಭಾರಿ ಪ್ರಮಾಣದ ಮಣ್ಣು, ಕಟ್ಟಿಗೆ ಮತ್ತು ಕೆಸರು ಮಿಶ್ರಿತ ನೀರು ವೇಗವಾಗಿ ಹರಿಯುತ್ತಿದೆ. ನೀರಿನ ರಭಸಕ್ಕೆ ಮನೆಗಳಲ್ಲಿದ್ದ ವಸ್ತುಗಳು ಕೊಚ್ಚಿಹೋಗುತ್ತಿವೆ. ಆ ಪ್ರವಾಹದ ನೀರಿಗೆ ಹಾರುವ ಕೆಲವು ಯುವಕರು ಆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಎಲ್​ಪಿಜಿ ಸಿಲಿಂಡರ್​​ಗಳನ್ನು ಎಳೆದುಕೊಂಡು ದಡಕ್ಕೆ ತರುತ್ತಿದ್ದಾರೆ. ಜೀವ ಉಳಿಸಿಕೊಳ್ಳಲಾಗದೆ ನೇಪಾಳದಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತಿರುವಾಗ ಜೀವದ ಹಂಗು ತೊರೆದು ಪ್ರವಾಹದ ನೀರಿಗೆ ಹಾರಿ ಸಿಲಿಂಡರ್ ತರುವ ಸಾಹಸ ಬೇಕಿತ್ತಾ? ಎಂಬುದು ನೆಟ್ಟಿಗರ ಪ್ರಶ್ನೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us