AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ-ಟಿಬೆಟ್ ಗಡಿಯಲ್ಲಿ ಮತ್ತೊಂದು ಪ್ರವಾಹದ ಭೀತಿ; ಚೀನಾದಿಂದ ಎಚ್ಚರಿಕೆ

ನೇಪಾಳ ಮತ್ತು ಚೀನಾದ ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಹಿಮಪಾತ ಹಾಗೂ ಭೂಕುಸಿತದ ಕಾರಣದಿಂದ ನದಿಯೊಂದರ ಹರಿವು ತಡೆಯಲ್ಪಟ್ಟು ಬೃಹತ್ 'ತಡೆಗೋಡೆ ಸರೋವರ' ನಿರ್ಮಾಣವಾಗಿದೆ. ಈ ಕೃತಕ ಸರೋವರವು ಮುಂದಿನ 72 ಗಂಟೆಗಳಲ್ಲಿ (3 ದಿನಗಳಲ್ಲಿ) ಒಡೆದು ಭಾರಿ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಚೀನಾದ ಜಲಸಂಪನ್ಮೂಲ ಸಚಿವಾಲಯ ತುರ್ತು ಎಚ್ಚರಿಕೆ ನೀಡಿದೆ. ಹೀಗಾಗಿ, ಈಗಾಗಲೇ ಪ್ರವಾಹಕ್ಕೆ ತತ್ತರಿಸಿರುವ ನೇಪಾಳದಲ್ಲಿ ಮತ್ತೊಂದು ಪ್ರವಾಹದ ಭೀತಿ ಎದುರಾಗಿದೆ.

ನೇಪಾಳ-ಟಿಬೆಟ್ ಗಡಿಯಲ್ಲಿ ಮತ್ತೊಂದು ಪ್ರವಾಹದ ಭೀತಿ; ಚೀನಾದಿಂದ ಎಚ್ಚರಿಕೆ
Nepal Floods
ಸುಷ್ಮಾ ಚಕ್ರೆ
|

Updated on: Aug 27, 2026 | 8:15 PM

Share

ಕಠ್ಮಂಡು, ಆಗಸ್ಟ್ 27: ನೇಪಾಳದಲ್ಲಿ (Nepal Flash Flood) ದಿಢೀರ್ ಪ್ರವಾಹದಿಂದ ಭಾರಿ ವಿನಾಶ ಸಂಭವಿಸಿರುವ ನಡುವೆಯೇ, ನೆರೆಯ ರಾಷ್ಟ್ರ ಚೀನಾ ಮತ್ತೊಂದು ಭೀಕರ ಅಪಾಯದ ಎಚ್ಚರಿಕೆ ನೀಡಿದೆ. ನೇಪಾಳ-ಟಿಬೆಟ್ ಗಡಿ ಭಾಗದಲ್ಲಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳ ಸಂಗಮದ ಬಳಿ ನಿರ್ಮಾಣವಾಗಿರುವ ‘ತಡೆಗೋಡೆ ಸರೋವರ’ ಮುಂದಿನ 72 ಗಂಟೆಗಳಲ್ಲಿ ಒಡೆದುಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ. ಚೀನಾದಲ್ಲಿ ಈಗಾಗಲೇ ಉಂಟಾಗಿರುವ ಪ್ರಕೃತಿ ವಿಕೋಪದ ನಡುವೆ ಹೊಸದಾಗಿ ಉಂಟಾಗಿರುವ ಕೃತಕ ಸರೋವರವು ಆತಂಕವನ್ನು ಇಮ್ಮಡಿಗೊಳಿಸಿದೆ.

ನೇಪಾಳ-ಚೀನಾ ಗಡಿಯ ನದಿ ತಡೆ ಪ್ರದೇಶದಲ್ಲಿ ಸರೋವರ ನಿರ್ಮಾಣವಾಗಿರುವ ಕುರಿತು ಚೀನಾ ಸರ್ಕಾರದಿಂದ ಮಾಹಿತಿ ಬಂದಿದೆ ಎಂದು ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ದೃಢಪಡಿಸಿದೆ. ಚೀನಾ ಸರ್ಕಾರವು ಈ ಮಾಹಿತಿಯನ್ನು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ಈ ಕೃತಕ ಸರೋವರ ಉಂಟಾಗಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳವನ್ನು ಪ್ರವೇಶಿಸುತ್ತವೆ. ಇವೆರಡೂ ನೇಪಾಳದ ‘ಭೋಟೇ ಕೋಶಿ’ ನದಿ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ಒಂದು ವೇಳೆ ಈ ಸರೋವರ ಒಡೆದರೆ ನದಿಯ ಕೆಳಭಾಗದಲ್ಲಿ ಮತ್ತೊಮ್ಮೆ ಪ್ರವಾಹದ ರೌದ್ರನರ್ತನ ಉಂಟಾಗಲಿದೆ.

ಇದನ್ನೂ ಓದಿ: ನೇಪಾಳದ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ, ತಮಿಳುನಾಡಿನ 21 ಜನರ ರಕ್ಷಣೆ; ಸರ್ಕಾರದಿಂದ ಮಾಹಿತಿ

ಎಲ್ಲಿದೆ ಈ ಸರೋವರ?:

ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಹರಿಯುವ ‘ಛೋಚೆನ್ ಖೋಲಾ’ (Chhochen Khola) ಮತ್ತು ‘ಪುರೆಪು ತ್ಸಾಂಗ್ಪೋ’ (Purepu Tsangpo) ನದಿಗಳು ಸಂಧಿಸುವ ಪ್ರದೇಶದಲ್ಲಿ ಈ ಕೃತಕ ಸರೋವರ ರೂಪುಗೊಂಡಿದೆ. ಈ ನದಿಗಳ ನೀರು ಮುಂದೆ ನೇಪಾಳದ ‘ಭೋಟೇ ಕೋಶಿ’ ಮತ್ತು ‘ತ್ರಿಶೂಲಿ’ ನದಿಗಳನ್ನು ಸೇರುತ್ತದೆ. ಪ್ರಸ್ತುತ ಈ ಸರೋವರದಲ್ಲಿ ಸುಮಾರು 20 ಲಕ್ಷ ಕ್ಯೂಬಿಕ್ ಮೀಟರ್​ ನೀರು ಸಂಗ್ರಹವಾಗಿದ್ದು, ಈಗಾಗಲೇ ಮೇಲಿಂದ ಹರಿಯಲು ಪ್ರಾರಂಭಿಸಿದೆ. ಮುಂದಿನ 3 ದಿನಗಳಲ್ಲಿ ಹೆಚ್ಚುವರಿಯಾಗಿ ಇನ್ನೂ 30 ಲಕ್ಷ ಕ್ಯೂಬಿಕ್ ಮೀಟರ್ ನೀರು ಈ ಸರೋವರಕ್ಕೆ ಸೇರುವ ನಿರೀಕ್ಷೆಯಿದೆ. ಇದರಿಂದ ನೀರಿನ ಒತ್ತಡ ಹೆಚ್ಚಾಗಿ ನೈಸರ್ಗಿಕ ತಡೆಗೋಡೆ ಒಡೆದುಹೋಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತದ ಚಿತ್ರಣ ಸೆರೆ

ಮತ್ತೊಂದು ಪ್ರವಾಹದ ಭೀತಿ:

ಬುಧವಾರವಷ್ಟೇ ಇದೇ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 350ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈಗ ಈ ಸರೋವರ ಒಡೆದರೆ, ನದಿಯ ಕೆಳಭಾಗದಲ್ಲಿರುವ ರಸುವಾ, ತ್ರಿಶೂಲಿ ಹಾಗೂ ನುವಾಕೋಟ್ ಜಿಲ್ಲೆಗಳ ಗ್ರಾಮಗಳಿಗೆ ಮತ್ತೊಮ್ಮೆ ಭಾರಿ ಪ್ರವಾಹದ ಅಲೆ ಅಪ್ಪಳಿಸುವ ಆತಂಕವಿದೆ. ಹೀಗಾಗಿ, ನೇಪಾಳ ಸರ್ಕಾರ ನದಿ ದಂಡೆಯ ಸೌಮ್ಯ ಪ್ರದೇಶಗಳಲ್ಲಿರುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!