ನೇಪಾಳದ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ, ತಮಿಳುನಾಡಿನ 21 ಜನರ ರಕ್ಷಣೆ; ಸರ್ಕಾರದಿಂದ ಮಾಹಿತಿ
ನೇಪಾಳದಲ್ಲಿ ನಿನ್ನೆ ಸಂಭವಿಸಿದ ಭೀಕರ ಪ್ರವಾಹಕ್ಕೆ 270 ಜನರು ಬಲಿಯಾಗಿದ್ದು, 288 ಭಾರತೀಯರು ಸೇರಿದಂತೆ ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ಪೈಕಿ ನೆರೆ ಸಂತ್ರಸ್ತ ನೇಪಾಳದಿಂದ 21 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ. ರಕ್ಷಿಸಲ್ಪಟ್ಟ 21 ಭಾರತೀಯರೂ ತಮಿಳುನಾಡಿನವರಾಗಿದ್ದು, ಅವರನ್ನು ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಟಿಬೆಟ್‌ನ ಚೀನಾ ಗಡಿ ಭಾಗದಲ್ಲೂ ಹಲವಾರು ಭಾರತೀಯರು ಸಿಲುಕಿಕೊಂಡಿದ್ದಾರೆ. 200ಕ್ಕೂ ಹೆಚ್ಚು ಭಾರತೀಯರು ನೆರವು ಕೋರಿದ್ದು, ಅವರಲ್ಲಿ 95 ಜನರು ಪ್ರಸ್ತುತ ದಾರ್ಚಿನ್‌ನಲ್ಲಿದ್ದಾರೆ. ಸಂಪರ್ಕಕ್ಕೆ ಸಿಗದ 288 ಭಾರತೀಯರಲ್ಲಿ 73 ಜನರು ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾದ ತ್ರಿಶೂಲಿಯಲ್ಲಿರುವ ವಿದ್ಯುತ್ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ನವದೆಹಲಿ, ಆಗಸ್ಟ್ 27: ನೇಪಾಳದಲ್ಲಿ (Nepal Flood) ಬುಧವಾರ ಸಂಭವಿಸಿದ ದಿಢೀರ್ ಪ್ರವಾಹಕ್ಕೆ (Nepal Flash Floods) ಬಲಿಯಾದವರ ಸಂಖ್ಯೆ 270 ದಾಟಿದೆ. ನಾಪತ್ತೆಯಾದವರ ಪೈಕಿ 288 ಭಾರತೀಯ ಪ್ರಜೆಗಳು ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಂತ್ರಸ್ತರಿಗೆ ನೆರವಾಗಲು ಭಾರತ ಸರ್ಕಾರವು ವಿಶೇಷ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿದೆ. ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಿಂದ ತಮಿಳುನಾಡಿನ 21 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ವಾಪಸ್ ಕರೆತರಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಕಂಟ್ರೋಲ್ ರೂಮ್‌ಗಳನ್ನು ತೆರೆದಿದೆ. ನಾಪತ್ತೆಯಾಗಿರುವ ಭಾರತೀಯರ ಕುಟುಂಬಸ್ಥರಿಗೆ ಮಾಹಿತಿ ನೀಡಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.
#WATCH | Delhi: MEA Spokesperson Randhir Jaiswal says, “… Prime Minister of India yesterday spoke to Prime Minister of Nepal, conveyed our deepest condolences, conveyed that India stands in solidarity with the people of Nepal, as also offered all possible assistance. There are… pic.twitter.com/ef0qMLyccE
— ANI (@ANI) August 27, 2026
ಇದನ್ನೂ ಓದಿ: 12 ವರ್ಷಗಳಲ್ಲಿ ಭಾರತ ಮತ್ತು ನೇಪಾಳವನ್ನು ಬೆಚ್ಚಿಬೀಳಿಸಿದ 7 ಪ್ರಮುಖ ವಿಪತ್ತುಗಳು
ಸಂಪರ್ಕಕ್ಕೆ ಸಿಗದ 288 ಭಾರತೀಯರ ವಿವರ:
- ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 73 ಭಾರತೀಯ ಉದ್ಯೋಗಿಗಳು
- ತಮಿಳುನಾಡಿನ 86 ಮಾನಸಸರೋವರ ಯಾತ್ರಿಕರು
- ಪಶ್ಚಿಮ ಬಂಗಾಳದ ರಸುವಾ ಜಿಲ್ಲೆಯ ತಿಮುರೆಯಲ್ಲಿ ಸಿಲುಕಿರುವ 32 ಪ್ರವಾಸಿಗರು
- ಕೇರಳದ 33 ನಾಗರಿಕರು
- ಇತರ ರಾಜ್ಯಗಳ 61 ಭಾರತೀಯರು
#WATCH | Delhi: On several people being stranded in flood-ravaged Nepal, MEA Spokesperson Randhir Jaiswal says, “The first group of 73 people who are working on the Trishuli-1 power project. Then, two separate groups of 37 and 49 nationals from Tamil Nadu, who traveled for… pic.twitter.com/tg9tYNCJ7I
— ANI (@ANI) August 27, 2026
ಚೀನಾ ಗಡಿಯ ಟಿಬೆಟ್ ಭಾಗದಲ್ಲೂ ಸುಮಾರು 200 ಭಾರತೀಯ ಕೈಲಾಸ ಮಾನಸಸರೋವರ ಯಾತ್ರಿಕರು ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಭಾರತ ಸರ್ಕಾರದ ನೆರವು ಕೋರಿದ್ದಾರೆ.
ಇದನ್ನೂ ಓದಿ: ನೇಪಾಳ ಪ್ರವಾಹ, 160ಕ್ಕೂ ಹೆಚ್ಚು ಮಂದಿ ಸಾವು, 133 ಭಾರತೀಯರು ಸೇರಿ 700ಕ್ಕೂ ಅಧಿಕ ಮಂದಿ ನಾಪತ್ತೆ
ಭಾರತದಿಂದ ನೆರವು ರವಾನೆ:
ಪ್ರವಾಹಕ್ಕೊಳಗಾದ ನೇಪಾಳಕ್ಕೆ ಭಾರತವು ತಕ್ಷಣದ ಮಾನವೀಯ ನೆರವು ನೀಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿ, “ನಿನ್ನೆ 10 ಟನ್ ನೆರವು ಕಳುಹಿಸಲಾಗಿತ್ತು. ಇಂದು 37.5 ಟನ್ ತೂಕದ ವೈದ್ಯಕೀಯ ಸಾಮಗ್ರಿಗಳು, ತಾತ್ಕಾಲಿಕ ಟೆಂಟ್‌ಗಳು, ಆಹಾರ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಎರಡನೇ ಸೇನಾ ವಿಮಾನ ನೇಪಾಳಕ್ಕೆ ತೆರಳಿದೆ” ಎಂದು ತಿಳಿಸಿದ್ದಾರೆ.
A second flight has just taken off, carrying 37.5 tonnes of HADR material, medicines & food packets for Nepal.
India remains in close and continuous touch with the Nepalese authorities. We will continue to strongly support the ongoing relief efforts.
🇮🇳🇳🇵 pic.twitter.com/4m46leqfkC
— Dr. S. Jaishankar (@DrSJaishankar) August 27, 2026
ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ನೆರೆ ಪೀಡಿತ ನುವಾಕೋಟ್ ಪ್ರದೇಶಕ್ಕೆ ರಸ್ತೆ ಮಾರ್ಗವಾಗಿ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ನೇಪಾಳ ಸೇನೆ ಮತ್ತು ಪೊಲೀಸರ ಸುಮಾರು 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದು, ಭಾರತ ನೀಡಿದ ಪರಿಹಾರ ಸಾಮಗ್ರಿಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರಿಗೆ ವಿತರಿಸಲಾಗುತ್ತಿದೆ. ಪ್ರವಾಹ ಪೀಡಿತ ಬಿಹಾರ ಗಡಿಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ನದಿಗಳ ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Thu, 27 August 26




