ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತದ ಚಿತ್ರಣ ಸೆರೆ

Updated on: Aug 27, 2026 | 5:28 PM

ಪ್ರವಾಹದ ರಭಸಕ್ಕೆ ಹಲವಾರು ನಗರಗಳು ಮತ್ತು ಹಳ್ಳಿಗಳು ಕೊಚ್ಚಿಹೋಗಿದ್ದು, ಪ್ರಮುಖ ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ನುವಾಕೋಟ್ ಮತ್ತು ತ್ರಿಶೂಲಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ವಿನಾಶದ ದೃಶ್ಯಗಳು ಡ್ರೋನ್ ಹಾಗೂ ವೈಮಾನಿಕ ವಿಡಿಯೋಗಳಲ್ಲಿ ಸೆರೆಯಾಗಿದ್ದು, ಪ್ರವಾಹದ ಭೀಕರತೆಯನ್ನು ಬಿಚ್ಚಿಟ್ಟಿವೆ. ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ನೇಪಾಳ ಸೇನಾ ಪಡೆಗಳನ್ನು ಒಳಗೊಂಡಂತೆ ಭಾರಿ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಕಠ್ಮಂಡು, ಆಗಸ್ಟ್ 27: ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹಕ್ಕೆ (Flash Floods) ನೆರೆಯ ರಾಷ್ಟ್ರ ನೇಪಾಳದಲ್ಲಿ (Nepal Flood) 332 ಜನರು ಬಲಿಯಾಗಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದಿಂದಾಗಿ ವ್ಯಾಪಕ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಪ್ರವಾಹದ ರಭಸಕ್ಕೆ ಹಲವಾರು ನಗರಗಳು ಮತ್ತು ಹಳ್ಳಿಗಳು ಕೊಚ್ಚಿಹೋಗಿದ್ದು, ಪ್ರಮುಖ ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ನುವಾಕೋಟ್ ಮತ್ತು ತ್ರಿಶೂಲಿ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ವಿನಾಶದ ದೃಶ್ಯಗಳು ಡ್ರೋನ್ ಹಾಗೂ ವೈಮಾನಿಕ ವಿಡಿಯೋಗಳಲ್ಲಿ ಸೆರೆಯಾಗಿದ್ದು, ಪ್ರವಾಹದ ಭೀಕರತೆಯನ್ನು ಬಿಚ್ಚಿಟ್ಟಿವೆ. ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ನೇಪಾಳ ಸೇನಾ ಪಡೆಗಳನ್ನು ಒಳಗೊಂಡಂತೆ ಭಾರಿ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us