ಸಹೋದರನ ಮಗನ ಸಾವಿನಿಂದ ರೇಣುಕಾಚಾರ್ಯ ವಿಚಲಿತರಾಗಿದ್ದಾರೆ, ಅದರೆ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಿದೆ: ಆರಗ ಜ್ಞಾನೇಂದ್ರ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 07, 2022 | 3:56 PM

ಎಫ್ ಎಸ್ ಎಲ್ ವರದಿ ಸಿಕ್ಕ ನಂತರ ಚಂದ್ರಶೇಖರ್ ಸಾವಿನ ಕಾರಣದ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಹೇಳಿದ ಸಚಿವರು ಮಗನ ಸಾವಿನಿಂದ ರೇಣುಕಾಚಾರ್ಯ ವಿಚಲಿತರಾಗಿದ್ದಾರೆ ಎಂದರು.

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಶಾಸಕ ಎಮ್ ಪಿ ರೇಣುಕಾಚಾರ್ಯರ (MP Renukacharya) ಸಹೋದರ ನಿಗೂಢ ಸಾವಿನ ತನಿಖೆಯ ಬಗ್ಗೆ ಮಾಹಿತಿಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಚಂದ್ರಶೇಖರ್ (Chandrashekar) ಸಾವಿನ ತನಿಖೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಸರಿಯಾದ ನಿಟ್ಟಿನಲ್ಲಿ ನಡೆದಿದೆ. ಎಡಿಜಿಪಿಯೂ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಅಂತ ಪ್ರಕರಣ ದಾಖಲಾಗೊದೆ, ಎಫ್ ಎಸ್ ಎಲ್ ವರದಿ ಸಿಕ್ಕ ನಂತರ ಚಂದ್ರಶೇಖರ್ ಸಾವಿನ ಕಾರಣದ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಹೇಳಿದ ಸಚಿವರು ಮಗನ ಸಾವಿನಿಂದ ರೇಣುಕಾಚಾರ್ಯ ವಿಚಲಿತರಾಗಿದ್ದಾರೆ ಎಂದರು.