Video: ಬೆಲ್ಲಿ ನೃತ್ಯ ನಡೀತಿತ್ತು , ಗೋವಾ ನೈಟ್​ಕ್ಲಬ್ ಒಳಗೆ ಬೆಂಕಿ ಹೊತ್ತಿಕೊಳ್ಳುವ ಸಮಯದ ವಿಡಿಯೋ

Updated on: Dec 07, 2025 | 9:42 AM

ಗೋವಾದ ನೈಟ್​ಕ್ಲಬ್ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ ಘಟನೆಯಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದು, 50ಕ್ಕೂ ಹೆಚ್ಚು ಮಂದಿ  ಗಾಯಗೊಂಡಿದ್ದಾರೆ.  ಈ ಘಟನೆ ನಡೆಯುವ ಮುನ್ನ ಡ್ಯಾನ್ಸರ್ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದರು. ಆ ವೇಳೆ ಸೀಲಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಲೇ ಬೆಂಕಿ ಎಲ್ಲೆಡೆ ಆವರಿಸಿತ್ತು. ಎಲ್ಲರೂ ತಪ್ಪಿಸಿಕೊಳ್ಳಲು ಸಮಯವಿರಲೇ ಇಲ್ಲ. ವೇದಿಕೆಯ ಮೇಲೆ  ಬೆಲ್ಲಿ ಡ್ಯಾನ್ಸರ್ ಪ್ರದರ್ಶನ ನೀಡುತ್ತಿರುವುದನ್ನು  ಕಾಣಬಹುದು.

ಪಣಜಿ, ಡಿಸೆಂಬರ್ 07: ಗೋವಾದ ನೈಟ್​ಕ್ಲಬ್ ಅರ್ಪೋರಾದ ಬಿರ್ಚ್ ಬೈ ರೋಮಿಯೋ ಲೇನ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ ಘಟನೆಯಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದು, 50ಕ್ಕೂ ಹೆಚ್ಚು ಮಂದಿ  ಗಾಯಗೊಂಡಿದ್ದಾರೆ.  ಈ ಘಟನೆ ನಡೆಯುವ ಮುನ್ನ ಡ್ಯಾನ್ಸರ್ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದರು. ಆ ವೇಳೆ ಸೀಲಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಲೇ ಬೆಂಕಿ ಎಲ್ಲೆಡೆ ಆವರಿಸಿತ್ತು. ಎಲ್ಲರೂ ತಪ್ಪಿಸಿಕೊಳ್ಳಲು ಸಮಯವಿರಲೇ ಇಲ್ಲ. ವೇದಿಕೆಯ ಮೇಲೆ  ಬೆಲ್ಲಿ ಡ್ಯಾನ್ಸರ್ ಪ್ರದರ್ಶನ ನೀಡುತ್ತಿರುವುದನ್ನು  ಕಾಣಬಹುದು. ವೀಡಿಯೊದ ಸುಮಾರು ಹತ್ತು ಸೆಕೆಂಡುಗಳಲ್ಲಿ, ನರ್ತಕಿಯ ಮೇಲಿರುವ ಸೀಲಿಂಗ್‌ನಿಂದ ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಒಂದು ಅಥವಾ ಎರಡು ಸೆಕೆಂಡುಗಳಲ್ಲಿ, ಬೆಂಕಿ ಸೀಲಿಂಗ್‌ನಾದ್ಯಂತ ಹರಡುತ್ತದೆ. ಜ್ವಾಲೆಗಳು ತೀವ್ರಗೊಳ್ಳುತ್ತಿದ್ದಂತೆ ನರ್ತಕಿ ಮತ್ತು ಇತರ ಸಿಬ್ಬಂದಿ ತಿರುಗಿ ಓಡುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 07, 2025 09:40 AM