‘ದಿ ಡೆವಿಲ್’ ಸಿನಿಮಾದಲ್ಲೂ ಗಿಲ್ಲಿ ಹವಾ: ಕಾಕ್ರೋಚ್ ಸುಧಿ ಹೇಳೋದೇನು?
ಬಿಗ್ ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಹೊರಬಂದ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಟಿವಿ9 ಜತೆ ಮಾತಿಗೆ ಸಿಕ್ಕಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಬಗ್ಗೆ ಸುಧಿ ಮಾತಾಡಿದ್ದಾರೆ. ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದಲ್ಲಿ ಗಿಲ್ಲಿ ನಟ ಪಾತ್ರ ಮಾಡಿದ್ದಾರೆ.
ನಟ ಕಾಕ್ರೋಚ್ ಸುಧಿ (Cockroach Sudhi) ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಟಿವಿ9 ಜೊತೆ ಮಾತಿಗೆ ಸಿಕ್ಕಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ (Gilli Nata) ಬಗ್ಗೆ ಸುಧಿ ಮಾತಾಡಿದ್ದಾರೆ. ದರ್ಶನ್ ಅಭಿನಯದ ‘ದಿ ಡೆವಿಲ್’ (The Devil Movie) ಸಿನಿಮಾದಲ್ಲಿ ಗಿಲ್ಲಿ ನಟ ಒಂದು ಪಾತ್ರ ಮಾಡಿದ್ದಾರೆ. ಸಿನಿಮಾದ ಟ್ರೇಲರ್ನಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ತಮಗೆ ಬಹಳ ಸಂತೋಷ ಇದೆ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ. ‘ಗಿಲ್ಲಿ ಗೆದ್ದರೆ ನನಗೆ ಖುಷಿ. ಅವನು ಟ್ರೇಲರ್ನಲ್ಲಿ ಕಾಣಿಸಿಕೊಂಡಿದ್ದು ಖುಷಿ. ನಮಗೆ ನಮ್ಮ ಸ್ನೇಹಿತ ಎಲ್ಲೋ ಒಂದು ಕಡೆ ಬರುತ್ತಾನೆ ಎಂದಾಗ ಸಂತೋಷ ಆಗುತ್ತದೆ. ನಮಗೂ ಕೂಡ ನಮ್ಮ ಪೋಸ್ಟರ್ ಎಲ್ಲೋ ಮೂಲೆಯಲ್ಲಿ ಬಂದಾಗ ಅಷ್ಟೇ ಖುಷಿ ಆಗುತ್ತಿತ್ತು’ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
