ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ರಸ್ತೆಗಿಳಿದ ವಿಂಟೇಜ್ ಕಾರುಗಳು: ಕಾರಣ ಏನ್ ಗೊತ್ತಾ?
ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನದ ಹಿನ್ನಲೆ ನಡೆದ ವಿಂಟೇಜ್ ಕಾರ್ ಱ್ಯಾಲಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸೌಧದಲ್ಲಿ ಚಾಲನೆ ನೀಡಿದರು. 75ಕ್ಕೂ ಹೆಚ್ಚು ವಿಂಟೇಜ್ ಕಾರುಗಳು, 100ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಬೆಂಗಳೂರು, ಡಿಸೆಂಬರ್ 07: ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನದ ಅಂಗವಾಗಿ ವಿಂಟೇಜ್ ಕಾರುಗಳ ವಿಶೇಷ ರ‍್ಯಾಲಿ ನಡೆಯಿತು. ಈ ರ‍್ಯಾಲಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಸುಮಾರು 75ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. ಈ ಕಾರುಗಳಲ್ಲಿ ಕೆಲವು ಬೆಂಗಳೂರು ಪೊಲೀಸರು ಬಳಸುತ್ತಿದ್ದ ವಾಹನಗಳಾಗಿರೋದು ವಿಶೇಷವಾಗಿತ್ತು. ಡ್ರಗ್ಸ್‌ನಿಂದ ಆಗುವ ಹಾವಳಿ ಮತ್ತು ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಂಟೇಜ್ ಕಾರುಗಳ ಮಾಲೀಕರ ಸಂಘವು ಕಾರ್ಯಕ್ರಮ ಆಯೋಜಿಸಿತ್ತು. ಎಸಿಎಸ್ ರಮಣರೆಡ್ಡಿ, ಡಿಜಿ ಐಜಿಪಿ ಅಲೋಕ್ ಮೋಹನ್, ಸಿಪಿ ಬಿ. ದಯಾನಂದ ಸಿಂಗ್ ಹಾಗೂ ಡಿಜಿ ಐಜಿಪಿ ಸಲೀಂ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ರ‍್ಯಾಲಿಯು ಬೆಂಗಳೂರಿನಾದ್ಯಂತ ಸಾಗಿ ರಾಮನಗರ ಜಿಲ್ಲೆಯ ದಿ ಬಿಗ್ ಬ್ಯಾನಿಯನ್ ವಿಂಟೇಜ್ ರೆಸಾರ್ಟ್ನಲ್ಲಿ ಅಂತ್ಯವಾಗಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

