New Year 2024: ವರ್ಷದ ಕೊನೆಯ ಸೂರ್ಯಾಸ್ತ: ನೋಡಿ ಕಣ್ತುಂಬಿಕೊಳ್ಳಿ
New Year 2024: ಕೊಪ್ಪಳ ತಾಲೂಕಿನ ಗಿಣಿಗೇರಾ ಕೆರೆದಡದಲ್ಲಿ ಸೂರ್ಯಾಸ್ತದ ಕೊನೆಯ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಹೊಂಬಣ್ಣವನ್ನು ಸೂಸುತ್ತಾ, ಕೆರೆಯ ನೀರಿನ ಮೇಲೆ ಬಂಗಾರದ ವರ್ಣಗಳ ಚಿತ್ತಾರ ಮೂಡಿಸಲಾಗಿದೆ. ಸೂರ್ಯಾಸ್ತದ ಈ ಮನಮೋಹಕ ದೃಶ್ಯವನ್ನು ನೋಡುವದೆ ಕಣ್ಣುಗಳಿಗೆ ಹಬ್ಬವಿದ್ದಂತೆ.
ಕೊಪ್ಪಳ, ಡಿಸೆಂಬರ್ 31: ಹೊಸ ವರ್ಷಾಚರಣೆಗೆ ಎಲ್ಲೆಡೆ ಕೌಂಟ್ಡೌನ್ ಶುರುವಾಗಿದೆ. ಜನರು ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ. ಇವೆಲ್ಲದರ ಮಧ್ಯೆ ವರ್ಷದ ಕೊನೆಯ ಸೂರ್ಯಾಸ್ತ (Sunset) ದ ಮನಮೋಹಕ ದೃಶ್ಯವನ್ನು ಟಿವಿ9 ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಹೊಂಬಣ್ಣವನ್ನು ಸೂಸುತ್ತಾ, ಕೆರೆಯ ನೀರಿನ ಮೇಲೆ ಬಂಗಾರದ ವರ್ಣಗಳ ಚಿತ್ತಾರ ಮೂಡಿಸಲಾಗಿದೆ. ಸೂರ್ಯಾಸ್ತದ ಈ ಮನಮೋಹಕ ದೃಶ್ಯವನ್ನು ನೋಡುವದೆ ಕಣ್ಣುಗಳಿಗೆ ಹಬ್ಬವಿದ್ದಂತೆ. ಕೊಪ್ಪಳ ತಾಲೂಕಿನ ಗಿಣಿಗೇರಾ ಕೆರೆದಡದಲ್ಲಿ ಟಿವಿ9 ಕ್ಯಾಮರಾಮೆನ್ ಮಾರುತಿ ಕಟ್ಟಿಮನಿ ಅವರು ಸೂರ್ಯಾಸ್ತದ ಕೊನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.