New Year 2026 Celebration Live: ನ್ಯೂ ಇಯರ್​ ಫೀವರ್, ಸಂಭ್ರಮಾಚರಣೆ ಶುರು

Updated on: Jan 01, 2026 | 12:29 AM

ಕಹಿನೆನಪುಗಳನ್ನ ಮರೆತು, ಸಿಹಿ ನೆನೆಪುಗಳನ್ನ ಮನದಲ್ಲೇ ಇರಿಸಿಕೊಂಡು ಹೊಸ ವರ್ಷವನ್ನ ಸ್ವಾಗತಿಸುವುದಕ್ಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಝಗಮಗ ಅಂತಿವೆ. 2026 ರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್​​ ನೋಡಿ.

ಬೆಂಗಳೂರು, ಡಿಸೆಂಬರ್​​ 31: ಇನ್ನೇನು ಕೆಲವೇ ಕ್ಷಣದಲ್ಲಿ 2025 ರ ಅಧ್ಯಾಯ ಮುಗಿಯಲಿದೆ. 2026ರ ಹೊಸ ಪರ್ವ ಶುರುವಾಗಲಿದೆ. ಇಂದು ಬೆಳಗಿನಿಂದಲೇ ರಾಜ್ಯದ ಉದ್ದಗಲಕ್ಕೂ ಜನ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಹೊಸ ವರ್ಷವನ್ನ ಸ್ವಾಗತಿಸೋಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದ ಸೆಲೆಬ್ರೇಷನ್ ಸ್ಪಾಟ್​ಗಳು ಲಕ ಲಕ ಅಂತಿವೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್​​ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 31, 2025 10:21 PM