New Year 2026: ಹೊಸ ವರ್ಷ ಅದ್ಧೂರಿಯಾಗಿ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ

Updated on: Dec 31, 2025 | 5:13 PM

ನ್ಯೂಜಿಲೆಂಡ್​​ನಲ್ಲಿ ಹೊಸವರ್ಷದ ಸಂಭ್ರಮ ಜೋರಾಗಿದೆ. ಸದ್ಯ ಅಲ್ಲಿ ಸಮಯ ಮಧ್ಯರಾತ್ರಿ 12 ಗಂಟೆ ಆಗಿದ್ದು, ನ್ಯೂಜಿಲೆಂಡ್‌ನ ಆಕ್ಲೆಂಡ್​​ ಜನರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ 2026ರ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಜಗತ್ತಿನಲ್ಲಿ ಮೊದಲಿಗೆ ಹೊಸವರ್ಷವನ್ನು ಸ್ವಾಗತಿಸುವ ದೇಶವೆಂಬ ಹೆಗ್ಗಳಿಕೆ ಪಡೆದಿದೆ. ಹೊಸ ವರ್ಷಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

ನ್ಯೂಜಿಲೆಂಡ್‌, ಡಿಸೆಂಬರ್​​ 31: ನ್ಯೂಜಿಲೆಂಡ್‌ನ ಆಕ್ಲೆಂಡ್ ನಗರ 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿತು. ಜಗತ್ತಿನಲ್ಲಿ ಮೊದಲಿಗೆ ಹೊಸವರ್ಷವನ್ನು ಸ್ವಾಗತಿಸುವ ಸ್ಥಳಗಳಲ್ಲಿ ಒಂದಾದ ಆಕ್ಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಜನರು ಕೇಕ್ ಕತ್ತರಿಸಿ, ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ನ್ಯೂಜಿಲೆಂಡ್‌ನ ಜನತೆ 2026ರ ವರ್ಷವನ್ನು ಸಡಗರ ಮತ್ತು ಉತ್ಸಾಹದಿಂದ ಬರಮಾಡಿಕೊಂಡರು. ಹೊಸ ವರ್ಷಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Dec 31, 2025 05:13 PM