AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪ್ರಿಂಗ್ ಇದೆಯಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು

ಸ್ಪ್ರಿಂಗ್ ಇದೆಯಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು

ಝಾಹಿರ್ ಯೂಸುಫ್
|

Updated on: Jan 26, 2026 | 11:53 AM

Share

India vs New Zealand, 3rd T20I: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸವನ್ನು ನಿರ್ಮಿಸಿದೆ.

ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬಳಿಕ ಕೂಡ ಕಿವೀಸ್ ಬೌಲರ್​ಗಳ ಬೆಂಡೆತ್ತಿದ ಯುವ ದಾಂಡಿಗ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 68 ರನ್ ಬಾರಿಸಿದ್ದರು.

ಈ ಮೂಲಕ ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ 155 ರನ್ ಸಿಡಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ನ್ಯೂಝಿಲೆಂಡ್ ಆಟಗಾರರಾದ ಮಿಚೆಲ್ ಸ್ಯಾಂಟ್ನರ್, ಡೆವೊನ್ ಕಾನ್ವೆ ಹಾಗೂ ಜೇಕಬ್ ಡಫಿ ಅಭಿಷೇಕ್ ಶರ್ಮಾ ಅವರ ಬ್ಯಾಟ್ ಅನ್ನು ಪರಿಶೀಲಿಸುತ್ತಿರುವುದು ಕಂಡು ಬಂತು.

ಅಭಿಷೇಕ್ ಶರ್ಮಾ ಅವರ ಆರ್ಭಟವನ್ನು ಕಣ್ತುಂಬಿಕೊಂಡಿದ್ದ ಕಿವೀಸ್ ಆಟಗಾರರು ಇದೇನು ಬ್ಯಾಟಾ? ಅಥವಾ ಬ್ಯಾಟ್​ನಲ್ಲಿ ಸ್ಪ್ರಿಂಗ್ ಏನಾದ್ರೂ ಇಟ್ಟಿದೆಯಾ ಎಂಬಾರ್ಥದಲ್ಲಿ ಟೀಮ್ ಇಂಡಿಯಾ ದಾಂಡಿಗನ ಕಾಲೆಳೆಯುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್​ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸವನ್ನು ನಿರ್ಮಿಸಿದೆ.