ಪ್ರಧಾನಿ ಎನರ್ಜಿ ಕಂಡು ಬೆರಗಾದರು ನಿಖಿಲ್ ಕಾಮತ್; ರಣಬೀರ್ ಕಪೂರ್ ಜೊತೆ ಬಿಚ್ಚು ಮಾತಾಡಿದ ಝೀರೋಧ ಮುಖ್ಯಸ್ಥ
Nikhil Kamath speaks with Ranbeer Kapoor on Narendra Modi: ವಾಷಿಂಗ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿಯನ್ನು ನಿಖಿಲ್ ಕಾಮತ್ ಸ್ಮರಿಸಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್ ಪ್ರವಾಸದಲ್ಲಿ ಪ್ರಧಾನಿಗಳು ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ದಣಿಯಲಿಲ್ಲ. ತಾನು ಸಂಜೆಯ ವೇಳೆಗೆ ಸಾಕಾಗಿ ಹೋಗಿದ್ದೆ ಎಂದು ಹೇಳುವ ಮೂಲಕ ಪ್ರಧಾನಿಗಳ ಶಕ್ತಿ ಬಗ್ಗೆ ನಿಖಿಲ್ ಕಾಮತ್ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜುಲೈ 28: ಸ್ಟಾಕ್ ಬ್ರೋಕರ್ ಸಂಸ್ಥೆ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಹೀರೋ ರಣಬೀರ್ ಕಪೂರ್ ಜೊತೆ ಅನೌಪಚಾರಿಕ ಹರಟೆಯಲ್ಲಿ ಪಾಲ್ಗೊಂಡಿದ್ದ ನಿಖಿಲ್ ಕಾಮತ್, ತಮ್ಮ ಅಮೆರಿಕ ಭೇಟಿ ವೇಳೆ ಪ್ರಧಾನಿ ಅವರ ಶಕ್ತಿ ಕಂಡು ಬೆರಗಾದ ಘಟನೆಯನ್ನು ಮೆಲುಕು ಹಾಕಿದರು. ಅವರ ಒಂದು ವಿಡಿಯೋ ಇಲ್ಲಿದೆ…
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ