ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ಕಾಲ ಕಳೆಯುತ್ತಿರುವ ಅವರ ಬಗ್ಗೆ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರೀತಿ ತೋರಿಸುತ್ತಿದ್ದಾರೆ. ಖೈದಿ ನಂಬರ್ 6106 ಬಗ್ಗೆ ದರ್ಶನ್ ಫ್ಯಾನ್ಸ್ಗೆ ಏನೋ ಒಂಥರಾ ಕ್ರೇಜ್. ಇಲ್ಲೊಬ್ಬ ಅಭಿಮಾನಿಯು ತಲೆ ಮೇಲೆ 6106 ನಂಬರ್ ಕಾಣುವ ರೀತಿಯಲ್ಲಿ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ.