ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಹಿಂದಿ, ಇಂಗ್ಲಿಷ್ ರೀತಿ ಕನ್ನಡದಲ್ಲಿ ಸಹ ಸ್ಟ್ಯಾಂಡಪ್ ಕಾಮಿಡಿ ಶೋಗಳು ಈಗ ಫೇಮಸ್ ಆಗುತ್ತಿದೆ. ಆದರೆ ಈ ರೀತಿಯ ಶೋಗಳಲ್ಲಿ ಅಡಲ್ಟ್ ಭಾಷೆ ಬಳಕೆ ಹೆಚ್ಚಾಗಿ ಇರುತ್ತದೆ. ಆ ಕುರಿತು ಕೇಳಿದ ಪ್ರಶ್ನೆಗೆ ನಿರೂಪ್ ಮೋಹನ್ ಹಾಗೂ ಶ್ರವಣ್ ಅವರು ಉತ್ತರ ನೀಡಿದ್ದಾರೆ.
ಇಂಗ್ಲಿಷ್, ಹಿಂದಿ ರೀತಿಯೇ ಕನ್ನಡದಲ್ಲಿ ಕೂಡ ನಿಧಾನವಾಗಿ ಸ್ಟ್ಯಾಂಡಪ್ ಕಾಮಿಡಿ (Stand-up Comedy) ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ ಇಂಥ ಶೋಗಳಲ್ಲಿ ಅಡಲ್ಟ್ ಭಾಷೆ ಬಳಕೆ ಹೆಚ್ಚಾಗಿ ಇರುತ್ತದೆ. ಆ ಬಗ್ಗೆ ಕೇಳಿದ ಪ್ರಶ್ನೆಗೆ ನಿರೂಪ್ ಮೋಹನ್ (Niroop Mohan) ಮತ್ತು ಶ್ರವಣ್ ಅವರು ಉತ್ತರ ನೀಡಿದ್ದಾರೆ. ‘ಸಿನಿಮಾದಲ್ಲಿ ಬೇರೆ ಬೇರೆ ಪ್ರಕಾರಗಳು ಇರುವ ರೀತಿಯೇ ಕಾಮಿಡಿಯಲ್ಲಿ ಕೂಡ ಬೇರೆ ಬೇರೆ ಶೈಲಿ ಇದೆ. ಫ್ಯಾಮಿಲಿ ಜತೆ ನೋಡಬೇಕು ಎಂದರೆ ಗಂಗಾವತಿ ಪ್ರಾಣೇಶ್ ಶೋ ನೋಡಬಹುದು. ಆದರೆ ಬೇರೆ ಪ್ರೇಕ್ಷಕರಿಗೆ ನಿರೂಪ್ ಶೋ ಇಷ್ಟ ಆಗುತ್ತದೆ’ ಎಂದು ಶ್ರವಣ್ (Shravan) ಹೇಳಿದ್ದಾರೆ. ‘ಇದು ಸಿನಿಮಾದಲ್ಲಿ ಐಟಂ ಸಾಂಗ್ ಇದ್ದಂತೆ’ ಎಂದು ನಿರೂಪ್ ಮೋಹನ್ ಹೇಳಿದ್ದಾರೆ. ‘18 ಪ್ಲಸ್ ವಿಷಯವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು. ನಾವು ಮಾಡಿರುವುದು ಮನರಂಜನೆಗೆ ಮಾತ್ರ’ ಎಂದು ಕೂಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
