‘ಏಳುಮಲೆ’ ಸಿನಿಮಾ ನೋಡಿ ‘ಮಹಾನಟಿ’ ಪ್ರಿಯಾಂಕಾ ಬಗ್ಗೆ ನಿಶ್ವಿಕಾ ನಾಯ್ಡು ಹೇಳಿದ್ದೇನು?
ಕಿರುತೆರೆಯ ‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ನಟಿ ಪ್ರಿಯಾಂಕಾ ಆಚಾರ್ ಅವರು ‘ಏಳುಮಲೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರಕ್ಕೆ ಅವರಿಗೆ ತುಂಬ ಮೆಚ್ಚುಗೆ ಸಿಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಸೆಲೆಬ್ರಿಟಿ ಶೋ ನಡೆಯಿತು. ನಿಶ್ವಿಕಾ ನಾಯ್ಡು ಅವರು ವಿಮರ್ಶೆ ಹಂಚಿಕೊಂಡರು.
ಕಿರುತೆರೆಯ ‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ನಟಿ ಪ್ರಿಯಾಂಕಾ ಆಚಾರ್ (Priyanka Achar) ಅವರು ‘ಏಳುಮಲೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಚೊಚ್ಚಲ ಚಿತ್ರಕ್ಕೆ ಅವರಿಗೆ ಬಹಳ ಮೆಚ್ಚುಗೆ ಸಿಗುತ್ತಿದೆ. ಇತ್ತೀಚೆಗೆ ‘ಏಳುಮಲೆ’ (Elumale) ಸಿನಿಮಾದ ಸೆಲೆಬ್ರಿಟಿ ಶೋ ನಡೆಯಿತು. ಸಿನಿಮಾ ನೋಡಿದ ಬಳಿಕ ನಟಿ ನಿಶ್ವಿಕಾ ನಾಯ್ಡು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಸಿನಿಮಾದಲ್ಲಿ ನಮ್ಮ ಮಹಾನಟಿ ಪ್ರಿಯಾಂಕಾ ಇದ್ದಾಳೆ. ನಮ್ಮ ಬೇಬಿ ಇವಳು. ಮಹಾನಟಿ ಮೊದಲ ದಿನದ ಆಡಿಷನ್ನಲ್ಲಿ ಮುಗ್ಧತೆ ಇತ್ತು. ಈಗ ಹೀರೋಯಿನ್ ಆಗಿದ್ದಾಳೆ. ಅವಳನ್ನು ಹೀರೋಯಿನ್ ಆಗಿ ನೋಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ನಿಶ್ವಿಕಾ ನಾಯ್ಡು (Nishvika Naidu) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
