Video: ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?

Updated on: Dec 17, 2025 | 5:52 PM

ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹಲವು ವಿಷಯಗಳ ಕುರಿತು ಕಾವೇರಿದ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆಯೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ನಡುವೆ ನಡೆದ ತಮಾಷೆಯ ಮಾತುಕತೆ ಎಲ್ಲರ ಗಮನ ಸೆಳೆದಿದೆ. ಸಂಸತ್ತಿನ ಹೊರಗೆ ಇಬ್ಬರೂ ನಾಯಕರ ಸ್ನೇಹಪರ ಸಂಭಾಷಣೆಯ ವಿಡಿಯೋ ಈಗ ವೈರಲ್ ಆಗಿದ್ದು, ರಾಜಕೀಯದ ಮಧ್ಯೆ ಲಘು ಕ್ಷಣಗಳನ್ನು ಪ್ರದರ್ಶಿಸಿದೆ.

ದೆಹಲಿ, ಡಿ.17: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಂದೇ ಮಾತರಂ, ಎಂಎನ್‌ಆರ್‌ಇಜಿಎ, ಶಿಕ್ಷಣ ಮಸೂದೆ ಮತ್ತು ಎಸ್‌ಐಆರ್‌ನಂತಹ ವಿಷಯಗಳ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ವಾದ-ವಿವಾದ ನಡೆಯುತ್ತಿದೆ. ಈ ಚರ್ಚೆಯ ನಡುವೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮಾಷೆಯಾಗಿ ಸಂಸತ್ತಿನ ಹೊರಗೆ ಮಾತನಾಡಿದ್ದಾರೆ. ಒಳನುಸುಳುಕೋರರನ್ನು ಹೊರಹಾಕುವುದಾಗಿ ಹೇಳುತ್ತಿದ್ದಾರೆ. ಅವರು ಒಬ್ಬರನ್ನಾದರೂ ಕಂಡುಹಿಡಿದಿದ್ದಾರೆಯೇ? ಎಂದು ಕಲ್ಯಾಣ್ ಬ್ಯಾನರ್ಜಿ ಕೇಳುತ್ತಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಗಡ್ಕರಿ, ನಾನು ಒಂದು ದಿನ ನಿನ್ನನ್ನು ಹುಡುಕುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಮುಂದೆ ಸಾಗಿದ ನಿತಿನ್ ಗಡ್ಕರಿ ಅವರನ್ನು ಎಳೆದು ಒಂದು ನಿಮಿಷ ಸರ್​​​ ನನ್ನ ಮಾತು ಕೇಳಿ ಎಂದು ಕಲ್ಯಾಣ್ ಬ್ಯಾನರ್ಜಿ ನಿತಿನ್ ಗಡ್ಕರಿ ಅವರ ಕಿವಿಯಲ್ಲಿ ಏನು ಗುಟ್ಟಾಗಿ ಹೇಳುತ್ತಾರೆ. ಕೆಲವು ಸಮಯಗಳ ಹೊತ್ತು ಇಬ್ಬರ ನಡುವೆ ಕೆಲವೊಂದು ತಮಾಷೆ ಮಾತಕತೆ ನಡೆಯಿತ್ತು. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ