ವೋಟ್​​ ಹಾಕಲು ಬಂದೋರಿಗೆ ವಾಪಸ್​ ಹೋಗಲು ಬಸ್ಸಿಲ್ಲ: ಬಸ್​​ಗಾಗಿ ಕಾದು ಸುಸ್ತಾದ ನೂರಾರು ಪ್ರಯಾಣಿಕರು

|

Updated on: May 11, 2023 | 7:42 PM

ಬಸ್​​ಗಾಗಿ ಕಾದು ನೂರಾರು ಪ್ರಯಾಣಿಕರು ಸುಸ್ತಾಗಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ KSRTC ಬಸ್ ಬರುತ್ತಿದ್ದು, ಸೀಟ್ ಗಿಟ್ಟಿಸಿಕೊಳ್ಳಲು ಮುಗಿಬಿದಿದ್ದಾರೆ. 

ತುಮಕೂರು: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮತದಾನ ಮಾಡಲು ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ತಮ್ಮ ನೆಚ್ಚಿನ ಅಭ್ಯರ್ಥಿಗೆ ವೋಟ್​ ಕೂಡ ಹಾಕಿದ್ದಾರೆ. ಆದರೆ ವಾವಸ್​ ಬರಲು ಬಸ್​ ಇಲ್ಲದೆ ಪರದಾಡಿದ್ದಾರೆ. ಹೌದು ಪಾವಗಡದಿಂದ ಬೆಂಗಳೂರಿಗೆ ತೆರಳಲು ಬಸ್​​ ಇಲ್ಲದೆ ಜನರು ಪರದಾಡಿರುವಂತಹ ಘಟನೆ ಜಿಲ್ಲೆಯ ಪಾವಗಡ KSRTC ಬಸ್ ನಿಲ್ದಾಣದಲ್ಲಿ ಕಂಡುಬಂದಿದೆ. ಮತದಾನ ಮಾಡಲು ಬೆಂಗಳೂರಿನಿಂದ ಪಾವಗಡಕ್ಕೆ ಜನರು ಆಗಮಿಸಿದ್ದಾರೆ. ಆದರೆ ಬೆಂಗಳೂರಿಗೆ ವಾಪಸಾಗಲು ಬಸ್​ ಇಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಬಸ್​​ಗಾಗಿ ಕಾದು ನೂರಾರು ಪ್ರಯಾಣಿಕರು ಸುಸ್ತಾಗಿದ್ದು, ಪ್ರತಿ ಎರಡು ಗಂಟೆಗೊಮ್ಮೆ KSRTC ಬಸ್ ಬರುತ್ತಿದ್ದು, ಸೀಟ್ ಗಿಟ್ಟಿಸಿಕೊಳ್ಳಲು ಮುಗಿಬಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.