ಬಿಜೆಪಿ ಪುರಸಭೆ ಸದಸ್ಯನಿಂದ ಕೋಟಿ ರೂ. ಬೆಟ್ಟಿಂಗ್ ಆಹ್ವಾನ: ಕಾಂಗ್ರೆಸ್ ಪರ ಕೋಟ್ಯಾಂತರ ರೂ. ಬೆಲೆ ಬಾಳುವ 4 ಎಕ್ಕರೆ ಜಮೀನು ಜತೆಗೆ 75 ಲಕ್ಷ ರೂ. ಬೆಟ್
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದ್ದು, ಬರೊಬ್ಬರಿ 73.19 ಪ್ರತಿಶತ ಮತದಾನವಾಗಿದೆ. ನಾಳೆ(ಮೇ.13) ಫಲಿತಾಂಶ ಕೂಡ ಹೊರ ಬಿಳಲಿದೆ. ಆದರೀಗ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಚಾಮರಾಜನಗರ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದ್ದು, ಬರೊಬ್ಬರಿ 73.19 ಪ್ರತಿಶತ ಮತದಾನವಾಗಿದೆ. ನಾಳೆ(ಮೇ.13) ಫಲಿತಾಂಶ ಕೂಡ ಹೊರ ಬಿಳಲಿದೆ. ಆದರೀಗ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ನಿನ್ನೆ(ಮೇ.11) ಕೋಟಿ ರೂ ಬೆಟ್ಟಿಂಗ್ಗೆ ಬಿಜೆಪಿ ಪುರಸಭೆ ಸದಸ್ಯ ಆಹ್ವಾನ ನೀಡಿದ್ದರು, ಇದೀಗ ಕಾಂಗ್ರೆಸ್ ಪರ ಕೋಟ್ಯಾಂತರ ಬೆಲೆ ಬಾಳುವ ನಾಲ್ಕು ಎಕ್ಕರೆ ಜಮೀನು ಜೊತೆ 75 ಲಕ್ಷ ಹಣ ಬೆಟ್ ಕಟ್ಟಲು ಮಲ್ಲಯ್ಯನ ಪುರ ನಿವಾಸಿಗಳು ಮುಂದಾಗಿದ್ದಾರೆ. ಸದ್ಯ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಜನರು ಬಿಡುತ್ತಿದ್ದಾರೆ. ಇನ್ನು ಇಷ್ಟೆಲ್ಲ ಬೆಟ್ಟಿಂಗ್ ಬಗ್ಗೆ ಬಹಿರಂಗವಾಗಿ ಸವಾಲುಗಳು ಹಾಕಿದ್ರು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos