ವೋಟ್ ಹಾಕಲು ಬಂದೋರಿಗೆ ವಾಪಸ್ ಹೋಗಲು ಬಸ್ಸಿಲ್ಲ: ಬಸ್ಗಾಗಿ ಕಾದು ಸುಸ್ತಾದ ನೂರಾರು ಪ್ರಯಾಣಿಕರು
ಬಸ್ಗಾಗಿ ಕಾದು ನೂರಾರು ಪ್ರಯಾಣಿಕರು ಸುಸ್ತಾಗಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ KSRTC ಬಸ್ ಬರುತ್ತಿದ್ದು, ಸೀಟ್ ಗಿಟ್ಟಿಸಿಕೊಳ್ಳಲು ಮುಗಿಬಿದಿದ್ದಾರೆ.
ತುಮಕೂರು: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮತದಾನ ಮಾಡಲು ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ತಮ್ಮ ನೆಚ್ಚಿನ ಅಭ್ಯರ್ಥಿಗೆ ವೋಟ್ ಕೂಡ ಹಾಕಿದ್ದಾರೆ. ಆದರೆ ವಾವಸ್ ಬರಲು ಬಸ್ ಇಲ್ಲದೆ ಪರದಾಡಿದ್ದಾರೆ. ಹೌದು ಪಾವಗಡದಿಂದ ಬೆಂಗಳೂರಿಗೆ ತೆರಳಲು ಬಸ್ ಇಲ್ಲದೆ ಜನರು ಪರದಾಡಿರುವಂತಹ ಘಟನೆ ಜಿಲ್ಲೆಯ ಪಾವಗಡ KSRTC ಬಸ್ ನಿಲ್ದಾಣದಲ್ಲಿ ಕಂಡುಬಂದಿದೆ. ಮತದಾನ ಮಾಡಲು ಬೆಂಗಳೂರಿನಿಂದ ಪಾವಗಡಕ್ಕೆ ಜನರು ಆಗಮಿಸಿದ್ದಾರೆ. ಆದರೆ ಬೆಂಗಳೂರಿಗೆ ವಾಪಸಾಗಲು ಬಸ್ ಇಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಬಸ್ಗಾಗಿ ಕಾದು ನೂರಾರು ಪ್ರಯಾಣಿಕರು ಸುಸ್ತಾಗಿದ್ದು, ಪ್ರತಿ ಎರಡು ಗಂಟೆಗೊಮ್ಮೆ KSRTC ಬಸ್ ಬರುತ್ತಿದ್ದು, ಸೀಟ್ ಗಿಟ್ಟಿಸಿಕೊಳ್ಳಲು ಮುಗಿಬಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos