Poco F5 Pro 5G: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಪೋಕೊ ಫೋನ್ ಬಿಡುಗಡೆ
ಚೀನಾ ಮೂಲದ ಶಓಮಿ ಕಂಪನಿಯ ಸಹಸಂಸ್ಥೆ ಮತ್ತು ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ರ್ಯಾಂಡಿಂಗ್ ಮೂಲಕ ಪ್ರಸಿದ್ಧಿ ಪಡೆದಿರುವ ಪೋಕೋ ಸಂಸ್ಥೆಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುತ್ತದೆ. ಇದೀಗ ಕೆಲ ತಿಂಗಳುಗಳ ಕಾಲ ಕಾದು, ಆಕರ್ಷಕವಾದ ಹೊಸ ಸ್ಮಾರ್ಟ್ಫೋನೊಂದನ್ನು ಅನಾವರಣ ಮಾಡಲು ಪೋಕೊ ಕಂಪನಿ ಮುಂದಾಗಿದೆ.
ಭಾರತದಲ್ಲಿ ಚೀನಾ ಮೂಲದ ಶಓಮಿ ಕಂಪನಿಯ ಸಹಸಂಸ್ಥೆ ಮತ್ತು ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ರ್ಯಾಂಡಿಂಗ್ ಮೂಲಕ ಪ್ರಸಿದ್ಧಿ ಪಡೆದಿರುವ ಪೋಕೋ ಸಂಸ್ಥೆಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುತ್ತದೆ. ಇದೀಗ ಕೆಲ ತಿಂಗಳುಗಳ ಕಾಲ ಕಾದು, ಆಕರ್ಷಕವಾದ ಹೊಸ ಸ್ಮಾರ್ಟ್ಫೋನೊಂದನ್ನು ಅನಾವರಣ ಮಾಡಲು ಪೋಕೊ ಕಂಪನಿ ಮುಂದಾಗಿದೆ. ಪೋಕೋ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪೋಕೋ ಎಫ್5 ಪ್ರೊ 5ಜಿ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್ ಮಾಡುತ್ತಿದೆ. ಆದರೆ, ಪೋಕೋ ಸಂಸ್ಥೆ ಈ ಫೋನಿನ ಫೀಚರ್ಸ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಮೂಲಗಳ ಪ್ರಕಾರ ಕೆಲ ವಿಚಾರಗಳು ಸೋರಿಕೆಯಾಗಿದೆ. ಹೊಸ ಫೋನ್ ವೈಶಿಷ್ಟ್ಯಗಳ ವಿವರ ಈ ವಿಡಿಯೊದಲ್ಲಿದೆ. 3200*1400 ಪಿಕ್ಸೆಲ್ ರೆಸೊಲ್ಯೂಷನ್ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಇದರಲ್ಲಿದ್ದು, ಕ್ವಾಲ್ಕಂ ಸ್ನ್ಯಾಪ್ಡ್ರ್ಯಾಗನ್ 8+ ಜೆನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. Android 13 ಮೂಲಕ ಕಾರ್ಯನಿರ್ವಹಣೆ ಜತೆಗೆ, 64 MP + 8 MP+ 2 MP ಹಿಂಭಾಗದ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಮತ್ತು 5,160mAh ಸಾಮರ್ಥ್ಯದ ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

