Loading video

ಹರೀಶ್ ಪೂಂಜಾ ದ್ವೇಷದ ರಾಜಕಾರಣ ಅಂದಿದ್ದು ಗೊತ್ತಿಲ್ಲ, ಶಾಸಕನ ವಿರುದ್ಧ ವಿನಾಕಾರಣ ಕೇಸ್ ಮಾಡಲಾಗಲ್ಲ: ಪರಮೇಶ್ವರ್

Updated on: May 05, 2025 | 1:26 PM

ಕರ್ನಾಟಕದಲ್ಲೂ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿರುವ ಹಾಗೆ ಬುಲ್ಡೋಜರ್ ಸಂಸ್ಕೃತಿಯನ್ನು ಜಾರಿಗೆ ತರಬೇಕು, ಸುಹಾಸ್ ಶೆಟ್ಟಿಯನ್ನು ಕೊಂದವರ ಮನೆಗಳನ್ನು ನೆಲಸಮಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಹೇಳಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಪರಮೇಶ್ವರ್ ಎಂದಿನಂತೆ ತಮ್ಮ ನೆಚ್ಚಿ ‘ನಂಗೊತ್ತಿಲ್ಲ’ ಪ್ರತಿಕ್ರಿಯೆ ನೀಡಿದರು.

ಬೆಂಗಳೂರು, ಮೇ 5:  ಹರೀಶ್ ಪೂಂಜಾ (Harish Poonja) ವಿರುದ್ಧ ಎಫ್​ಐಅರ್ ದಾಖಲಾಗಿರುವುದಕ್ಕೆ ಸಂಬಂಧಿಸಿದಂತೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಒಬ್ಬ ಶಾಸಕನ ವಿರುದ್ಧ ಸುಖಾಸುಮ್ಮನೆ ಪ್ರಕರಣ ದಾಖಲಿಸಲಾಗಲ್ಲ, ಅವರು ದ್ವೇಷದ ರಾಜಕಾರಣ ಅಂತ ಹೇಳಿರುವುದು ಗೊತ್ತಿಲ್ಲ, ಸಚಿವರು ಆಡಿದ ಮಾತುಗಳಿಗೆ ಅನ್ವಯ ತಕ್ಕ ಸೆಕ್ಷನ್ ಗಳನ್ನು ವಿಧಿಸಿ ಕೇಸು ದಾಖಲಾಗಿಸಲಾಗಿರುತ್ತದೆ ಎಂದು ಹೇಳಿದರು. ಸಾಕ್ಷ್ಯಗಳು ಸಿಗದ ಕಾರಣ ಹನಿಟ್ರ್ಯಾಪ್ ಪ್ರಕರಣ ಮುಚ್ಚಿಹೋಗುತ್ತದೆ, ಎಂದು ಸಚಿವ ಕೆಎಸ್ ರಾಜಣ್ಣ ನೀಡುತ್ತಿರುವ ಹೇಳಿಕೆಗಳಿಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿದ, ಪ್ರಕರಣ ಮುಚ್ಚಿಹೋಗುತ್ತದೆ ಅಂತಲ್ಲ, ಅವರು ಯಾವ ಕಾಂಟೆಕ್ಸ್ಟ್​ನಲ್ಲಿ ಅವರು ಹೇಳಿಕೆ ನೀಡಿದ್ದಾರೆ ಅನ್ನೋದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:  ಕರಾವಳಿಗೆ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್, ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧವೂ ಕ್ರಮ: ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 05, 2025 01:24 PM