Video: ಯುಪಿಐ ಪಾವತಿ ವಿಫಲ, ಸಮೋಸಾ ತಿಂದು ಕೈ ಒರೆಸಿ ಓಡಿ ರೈಲು ಹತ್ತಲು ಯತ್ನಿಸಿದ ಯುವಕ, ಆಗಿದ್ದೇನು?

Updated on: Oct 20, 2025 | 10:36 AM

ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಸಮೋಸಾ ಖರೀದಿಸಿದ್ದರು. ಆದರೆ ಯುಪಿಐ ಪಾವತಿ ವಿಫಲವಾಗಿತ್ತು. ಆದರೆ ಹಣ ಕೊಡದೆ ರೈಲು ಹತ್ತಿ ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನು ಮಾರಾಟಗಾರ ಹಿಡಿದೆಳೆದು ಅವರ ಕೈಯಿಂದ ವಾಚ್ ಕಸಿದುಕೊಂಡು ಕಳುಹಿಸಿರುವ ಘಟನೆ ವರದಿಯಾಗಿದೆ. ಪ್ರಯಾಣಿಕ 10 ರೂ.ಗಳ ಸಮೋಸಾ ಖರೀದಿಸಿದ್ದ. ರೈಲು ಹೊರಡಲು ಪ್ರಾರಂಭಿಸಿದಾಗ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ, ಆದರೆ ಅದು ವಿಫಲವಾಗಿತ್ತು.

ನವದೆಹಲಿ, ಅಕ್ಟೋಬರ್ 20: ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಸಮೋಸಾ ಖರೀದಿಸಿದ್ದರು. ಆದರೆ ಯುಪಿಐ ಪಾವತಿ ವಿಫಲವಾಗಿತ್ತು. ಆದರೆ ಹಣ ಕೊಡದೆ ರೈಲು ಹತ್ತಿ ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನು ಮಾರಾಟಗಾರ ಹಿಡಿದೆಳೆದು ಅವರ ಕೈಯಿಂದ ವಾಚ್ ಕಸಿದುಕೊಂಡು ಕಳುಹಿಸಿರುವ ಘಟನೆ ವರದಿಯಾಗಿದೆ. ಪ್ರಯಾಣಿಕ 10 ರೂ.ಗಳ ಸಮೋಸಾ ಖರೀದಿಸಿದ್ದ. ರೈಲು ಹೊರಡಲು ಪ್ರಾರಂಭಿಸಿದಾಗ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ, ಆದರೆ ಅದು ವಿಫಲವಾಗಿತ್ತು. ಆತುರದಿಂದ ರೈಲಿನೆಡೆಗೆ ಓಡಿದ್ದಾನೆ. ಸಂದೀಪ್ ಎಂಬ ಮಾರಾಟಗಾರ ಆತನ ಕಾಲರ್ ಹಿಡಿದು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಮತ್ತೊಮ್ಮೆ ವಹಿವಾಟು ಮಾಡಲು ಪ್ರಯತ್ನಿಸಿದರೂ ಮತ್ತೆ ವಿಫಲವಾಯಿತು. ನಗದು ಇರಲಿಲ್ಲ, ಸಮಯವೂ ಇರಲಿಲ್ಲ ಹೀಗಾಗಿ ಆತ ತನ್ನ ವಾಚ್ ಕೊಟ್ಟು ಅಲ್ಲಿಂದ ಹೋಗಿದ್ದಾರೆ. ವಾಚ್ ಪಡೆದ ಬಳಿಕ ಮಾರಾಟಗಾರ ಆತನ ಕೈತುಂಬಾ ಸಮೋಸಾ ಕೊಟ್ಟು ಕಳುಹಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ