AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗೆ ದಿಂಬಂ ಘಾಟ್​ನಲ್ಲಿ ಕುಸಿದ ರಸ್ತೆ: ಸಂಚಾರದಲ್ಲಿ ವ್ಯತ್ಯಯ

ಮಳೆಗೆ ದಿಂಬಂ ಘಾಟ್​ನಲ್ಲಿ ಕುಸಿದ ರಸ್ತೆ: ಸಂಚಾರದಲ್ಲಿ ವ್ಯತ್ಯಯ

ಪ್ರಸನ್ನ ಹೆಗಡೆ
|

Updated on: Oct 20, 2025 | 10:49 AM

Share

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಇತಿಹಾಸ ಪ್ರಸಿದ್ಧ ಅಂತರಗಟ್ಟೆ ದುರ್ಗಾಂಬದೇವಿ ದೇವಸ್ಥಾನದ ಗರ್ಭಗುಡಿ ಸೋರುತ್ತಿರುವುದಕ್ಕೆ ಭಕ್ತರು ಕಿಡಿ ಕಾರಿದ್ದಾರೆ. ಡರಾತ್ರಿ ಸುರಿದ ಮಳೆಗೆ ಮೈಸೂರು- ಸತ್ಯಮಂಗಲ ಸಂಪರ್ಕಿಸುವ ದಿಂಬಂ ಘಾಟ್ ನ 7, 8, 20 ಮತ್ತು 27ನೇ ಹೇರ್ ಪಿನ್ ಕರುವಿನಲ್ಲಿ ಮಣ್ಣು ಕುಸಿತವಾಗಿದೆ.

ಚಾಮರಾಜನಗರ/ಚಿಕ್ಕಮಗಳೂರು: ರಾಜ್ಯದ ಹಲವೆಡೆ ವರುಣ (Rain) ಅಬ್ಬರಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಅಜ್ಜಂಪುರ ‌ಸಮೀಪದ ಇತಿಹಾಸ ಪ್ರಸಿದ್ಧ ಅಂತರಗಟ್ಟೆ ದುರ್ಗಾಂಬದೇವಿ ದೇವಸ್ಥಾನದ ಗರ್ಭಗುಡಿ ಸೋರುತ್ತಿದ್ದು, ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ತಡರಾತ್ರಿ ಸುರಿದ ಮಳೆಗೆ ಮೈಸೂರು- ಸತ್ಯಮಂಗಲ ಸಂಪರ್ಕಿಸುವ ದಿಂಬಂ ಘಾಟ್ ನ 7, 8, 20 ಮತ್ತು 27ನೇ ಹೇರ್ ಪಿನ್ ಕರುವಿನಲ್ಲಿ ಮಣ್ಣು ಕುಸಿತವಾಗಿದೆ. ಪರಿಣಾಮ ಸಂಚಾರದಲ್ಲಿ ವ್ಯತ್ಯವಾಗಿದ್ದು, ಜೆಸಿಬಿ ಮೂಲಕ ರಸ್ತೆಯಲ್ಲಿ ಬಿದ್ದಿರುವ ಮಣ್ಣಿನ ತೆರವು ಕಾರ್ಯ ನಡೆಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.