Karnataka Assembly Session: ಉತ್ತರ ಕರ್ನಾಟಕದಲ್ಲಿ ಕೇವಲ ಕೃಷಿ ಕ್ರಾಂತಿ ಆದರೆ ಸಾಲದು, ಔದ್ಯೋಗಿಕ ಕ್ರಾಂತಿಯೂ ಅಗಬೇಕು: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ

Updated on: Dec 18, 2024 | 3:52 PM

ಕೇವಲ ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅನಿಸಿಕೊಳ್ಳಲಾರದು, ರಸ್ತೆಯಲ್ಲಿ ಓಡಾಡಲಾಗದಷ್ಟು ಬೆಂಗಳೂರು ಬೆಳೆದಿದೆ ಆದರೆ ಉತ್ತರ ಕರ್ನಾಟಕದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡದಂಥ ಸ್ಥಿತಿ ನಿರ್ಮಾಣವಾಗಿದೆ, ಜನ ತಮ್ಮ ಹೆಣ್ಣುಮಕ್ಕಳನ್ನು ಸರ್ಕಾರೀ ಕಚೇರಿಗಳಲ್ಲಿ ಚಪ್ರಾಸಿಗಳಾಗಿ ಕೆಲಸ ಮಾಡುವವರಿಗೆ ಕೊಡಲು ಸಿದ್ದರಿದ್ದಾರೆಯೇ ಹೊರತು ಬೇಸಾಯ ಮಾಡುವವರಿಗೆ ಕೊಟ್ಟು ಮದುವೆ ಮಾಡಲು ಒಪ್ಪಲಾರರು ಎಂದು ಸವದಿ ಹೇಳಿದರು.

ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕಾದರೆ ಅಸಲಿಗೆ ಆಗಬೇಕಿರುವುದೇನು ಅಂತ ಅಥಣಿ ಶಾಸಕ ಲಕ್ಷ್ಮಣ ಸವದಿ ಇವತ್ತು ಸದನದಲ್ಲಿ ಸವಿಸ್ತಾರವಾಗಿ ಹೇಳಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೇವಲ ಕೃಷಿ ಕ್ರಾಂತಿಯಾದರೆ ಸಾಲದು, ಔದ್ಯೋಗಿಕ ಕ್ರಾಂತಿಯೂ ಆಗಬೇಕಿದೆ, ಈ ಭಾಗದವವರೇ ಅಗಿರುವ ಎಂಬಿ ಪಾಟೀಲ್ ಕೈಗಾರಿಕಾ ಸಚಿವರಾಗಿರುವುದು ಸುದೈವ, ಅವರು ಹೊಸ ನೀತಿಗಳ ಮೂಲಕ ಉತ್ತರ ಕರ್ನಾಟದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನ ನಡೆಸಿರುವುದು ಶ್ಲಾಘನೀಯ, ಅವರಿಗೆ ದಕ್ಷಿಣ ಭಾಗದ ಸಚಿವರು ಸಹಕಾರ ನೀಡಬೇಕು ಮತ್ತು ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session: ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ನನ್ನ ಸಕ್ಕರೆ ಕಾರ್ಖಾನೆ ಬಿಟ್ಟು ಬೇರೆ ಯೋಚನೆಯೇ ಇಲ್ಲ: ಬಸನಗೌಡ ಯತ್ನಾಳ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.