Karnataka Assembly Session: ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ನನ್ನ ಸಕ್ಕರೆ ಕಾರ್ಖಾನೆ ಬಿಟ್ಟು ಬೇರೆ ಯೋಚನೆಯೇ ಇಲ್ಲ: ಬಸನಗೌಡ ಯತ್ನಾಳ್

Karnataka Assembly Session: ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ನನ್ನ ಸಕ್ಕರೆ ಕಾರ್ಖಾನೆ ಬಿಟ್ಟು ಬೇರೆ ಯೋಚನೆಯೇ ಇಲ್ಲ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 18, 2024 | 2:02 PM

Karnataka Assembly Session: ಪ್ರಿಯಾಂಕ್ ಖರ್ಗೆ ಮತ್ತು ಎಂಬಿ ಪಾಟೀಲ್ ಅವರನ್ನು ಯತ್ನಾಳ್ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮಂತ್ರಿಗಳು ಅಂತ ಹೇಳಿದ್ದು ವಿಡಂಬನಾತ್ಮಕವಾಗಿಯೇ ಅಂತ ಸಂಶಯ ಹುಟ್ಟಿದ್ದು ಸುಳ್ಳಲ್ಲ. ಅದರೆ ಯತ್ನಾಳ್ ಮಾತುಗಳಿಗೆ ಇವರಿಬ್ಬರೇ ಕೌಂಟರ್ ಕೊಡುತ್ತಿದ್ದರು. ತಮ್ಮ ಕಾರ್ಖಾನೆಗೆ ಸಂಬಂಧಿಸಿದಂತೆ ಅವಶ್ಯವಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸದೆ ಶಾಸಕ ಯತ್ನಾಳ್ ವೃಥಾ ಅರೋಪ ಮಾಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.

ಬೆಳಗಾವಿ: ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಲು ಎದ್ದುನಿಂತರೆ ತಮ್ಮ ಮಾತು ಮುಗಿಯದ ಹೊರತು ಕೂರುವುದಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಮಾತಾಡುತ್ತಾ ಅವರು ತಮ್ಮ ಚಿಂಚೋಳಿ ಸಕ್ಕರೆ ಕಾರ್ಖಾನೆ ಬಗ್ಗೆಯೂ ಮಾತಾಡಿದರು. ಚಿಂಚೋಳಿ ಭಾಗದಲ್ಲಿ ಹಲವಾರು ಸಿಮೆಂಟ್ ಕಾರ್ಖಾನೆಗಳಿವೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಧೂಳು ವಾತಾವರಣವನ್ನು ಸೇರುತ್ತಿದೆ, ಅದರೆ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಅದರ ಬಗ್ಗೆ ಪರಿವೆ ಇಲ್ಲ, ಅವರಿಗೆ ಬೆಳಗ್ಗೆಯಿಂದ ಸಾಯಂಕಾಲದವರಗೆ ಯತ್ನಾಳ್ ಸಕ್ಕರೆ ಕಾರ್ಖಾನೆಯ ಬಗ್ಗೆಯೇ ಯೋಚನೆ, ಅದರ ಬಗ್ಗೆ ಸಚಿವರೊಂದಿಗೆ ಮಾತಾಡುವುದರಲ್ಲೇ ದಿನಕಳೆದು ಹೋಗುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Assembly Session: ಸದನದಲ್ಲಿ ಬಸನಗೌಡ ಯತ್ನಾಳ್ ಮತ್ತು ಜಮೀರ್ ಅಹ್ಮದ್ ನಡುವೆ ಸೇರಿಗೆ ಸವ್ವಾಸೇರು ವಾಗ್ವಾದ