30 ಅಡಿ ಆಳದ ಬಾವಿಗೆ ಬಿದ್ದ ಆನೆ: ಅರಣ್ಯಾಧಿಕಾರಿಗಳ 6 ಗಂಟೆಗಳ ಕಾರ್ಯಚರಣೆ ಹೇಗಿತ್ತು ನೋಡಿ

Updated on: Mar 07, 2026 | 10:14 PM

ಒಡಿಶಾದ ಕಿಯೊಂಜರ್ ಜಿಲ್ಲೆಯ ಬನಾಜೋಡಿ ಗ್ರಾಮದಲ್ಲಿ 30 ಅಡಿ ಆಳದ ಬಾವಿಗೆ ಕಾಡಾನೆಯೊಂದು ಬಿದ್ದಿತ್ತು. ಅರಣ್ಯ ಇಲಾಖೆಯು ಜಾಣ್ಮೆಯಿಂದ 'ಆರ್ಕಿಮಿಡೀಸ್ ತತ್ವ'ವನ್ನು ಬಳಸಿ ಬಾವಿಗೆ ನೀರು ತುಂಬಿಸಿ ಆನೆಯನ್ನು ಮೇಲೆತ್ತಿತು. ನಂತರ ಜೆಸಿಬಿ ಬಳಸಿ ದಾರಿ ಮಾಡಿ ಸುರಕ್ಷಿತವಾಗಿ ರಕ್ಷಿಸಲಾಯಿತು. ಆರು ಗಂಟೆಗಳ ಜಂಟಿ ಕಾರ್ಯಾಚರಣೆಯಿಂದ ಆನೆಗೆ ಯಾವುದೇ ಅಪಾಯವಾಗಲಿಲ್ಲ.

ಕಿಯೊಂಜರ್, ಮಾ.7: ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ಒಡಿಶಾದ ಕಿಯೊಂಜರ್ ಜಿಲ್ಲೆಯ ಬನಾಜೋಡಿ ಗ್ರಾಮದ 30 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ತೋರಿದ ಜಾಣ್ಮೆ ಎಲ್ಲರ ಗಮನ ಸೆಳೆದಿದೆ. ಆನೆಯನ್ನು ಹಗ್ಗಗಳಿಂದ ಮೇಲೆತ್ತುವುದು ಅಪಾಯಕಾರಿ ಎಂದು ಮನಗಂಡ ಅಧಿಕಾರಿಗಳು, ಬಾವಿಗೆ ನೀರನ್ನು ಪಂಪ್ ಮಾಡುವ ಮೂಲಕ ಆನೆಯನ್ನು ಮೇಲೆಕ್ಕೆ ತೇಲುವಂತೆ ಮಾಡುವ ‘ಆರ್ಕಿಮಿಡೀಸ್ ತತ್ವವನ್ನು (Archimedes’ Principle) ಬಳಸಿದರು. ಬಾವಿಗೆ ನೀರು ತುಂಬುತ್ತಿದ್ದಂತೆ ಆನೆಯು ನೀರಿನ ಮಟ್ಟದೊಂದಿಗೆ ಮೇಲೆ ಬಂದಿತು. ಇದು ಆನೆಯ ಮೇಲೆ ಹೆಚ್ಚಿನ ಒತ್ತಡ ಅಥವಾ ಗಾಯಗಳಾಗದಂತೆ ತಡೆಯಲು ಸಹಕಾರಿಯಾಯಿತು. ಆನೆಯು ಅರ್ಧದಷ್ಟು ಮೇಲೆ ಬಂದ ನಂತರ, ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಪಕ್ಕದಲ್ಲಿ ದಾರಿ ನಿರ್ಮಿಸಿ ಆನೆಯನ್ನು ಸುರಕ್ಷಿತವಾಗಿ ಹೊರಬರುವಂತೆ ಮಾಡಲಾಯಿತು. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಆನೆಗೆ ಯಾವುದೇ ಪ್ರಾಣಾಪಾಯ ಸಂಭವಿಸದೆ ಅದು ಕಾಡಿನತ್ತ ತೆರಳಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More