Video: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿದ್ದಲ್ಲದೆ ಚರಂಡಿ ನೀರು ಕುಡಿಸಿ ವಿಕೃತಿ ತೋರಿದ ಜನ

Updated on: Jun 24, 2025 | 12:39 PM

ಇಬ್ಬರು ದಲಿತರಿಗೆ ಗುಂಪೊಂದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದ್ದು,  ವಿಡಿಯೋ ವೈರಲ್ ಆಗಿದೆ. ಇಬ್ಬರಿಗೆ ಬಾಯಲ್ಲಿ ಹುಲ್ಲು ಕಚ್ಚಿಕೊಂಡು ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಧರಕೋಟೆ ಬ್ಲಾಕ್​ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು.

ಗಂಜಾಂ, ಜೂನ್ 24: ಇಬ್ಬರು ದಲಿತರಿಗೆ ಗುಂಪೊಂದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದ್ದು,  ವಿಡಿಯೋ ವೈರಲ್ ಆಗಿದೆ. ಇಬ್ಬರ ಬಾಯಿಗೆ ಹುಲ್ಲು  ತುರುಕಿ ಪ್ರಾಣಿಯಂತೆ 2 ಕಿ.ಮೀ ನಡೆಸಿದ್ದಷ್ಟೇ ಅಲ್ಲದೆ, ಚರಂಡಿ ನೀರು ಕುಡಿಸಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಧರಕೋಟೆ ಬ್ಲಾಕ್​ನ ಸಿಂಗಿಪುರ ಗ್ರಾಮದ ಬುಲು ನಾಯಕ್ ಹಾಗೂ ಬಾಬುಲಾ ನಾಯಕ್ ತಮ್ಮ ಮಗಳ ಮದುವೆಗೆ ವರದಕ್ಷಿಣೆ ವ್ಯವಸ್ಥೆಯ ಭಾಗವಾಗಿ ಮೂರು ಹಸುಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿತ್ತು.

ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೊಡಲು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರಿಗೆ ಹುಲ್ಲು ತಿನ್ನಿಸಿದ್ದಷ್ಟೇ ಅಲ್ಲದೆ ಚರಂಡಿ ನೀರು ಕೂಡ ಕುಡಿಸಿದ್ದಾರೆ ಎನ್ನಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 24, 2025 12:35 PM