The Oldest Elephant? ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿರುವ ವತ್ಸಲಾ ವಿಶ್ವದ ಅತ್ಯಂತ ದೀರ್ಘಾಯುಷಿ ಆನೆ ಎನ್ನುತ್ತಾರೆ, ಆದರೆ ದಾಖಲೆಗಳಿಲ್ಲ!

ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2023 | 8:07 AM

ವತ್ಸಲಾಳ ವಯಸ್ಸು ದೃಢೀಕರಿಸಲು ಕೇರಳದಿಂದ ದಾಖಲಾತಿಗಳನ್ನು ಪಡೆಯುವ ಪ್ರಯತ್ನ ಜಾರಿಯಲ್ಲಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿರುವ (Panna Tiger Reserve) ವತ್ಸಲಾ (Vatsala) ಹೆಸರಿನ ಈ ಹೆಣ್ಣಾನೆಯ ವಯಸ್ಸು 100 ವರ್ಷ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳತ್ತಾರೆ. ಹಾಗಾಗಿ, ವತ್ಸಲಾಳನ್ನು ವಿಶ್ವದ ಅತ್ಯಂತ ದೀರ್ಘಾಯುಷಿ (the oldest) ಆನೆ ಅಂತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕಕ್ಕೆ ಸೇರಿಸಬೇಕೆಂದು ಅಧಿಕಾರಿಗಳು ಆಗ್ರಹಿಸುತ್ತಿದ್ದಾರೆ. ಆದರೆ ಅದಕ್ಕೊಂದು ಅಡಚಣೆ ಇದೆ.

ಇದನ್ನೂ ಓದಿ:  Vande Bharat Express: ಆಂಧ್ರಪ್ರದೇಶದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

‘ಆನೆಯ ಹೆಸರನ್ನು ಅಂತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ನೋಂದಾಯಿಸಲು ನಮ್ಮಲ್ಲಿ ದಾಖಲೆಗಳಿಲ್ಲ. ಎಲ್ಲಿರಿಗೂ ಗೊತ್ತಿರುವ ಹಾಗೆ ವತ್ಸಲಾಳನ್ನು ಇಲ್ಲಿಗೆ ಹೊಶಾಂಗಾಬಾದ್ ನಿಂದ ಸ್ಥಳಾಂತರಿಲಾಗಿದೆ ಮತ್ತು ಅದಕ್ಕೂ ಮೊದಲು ಅವಳನ್ನು ಹೊಶಾಂಗಾಬಾದ್ ಗೆ ಕೇರಳದಿಂದ ಸಾಗಿಸಲಾಗಿತ್ತು. ಕೇರಳದಿಂದ ನಮಗೆ ಯಾವುದೇ ದಾಖಲೆ ಲಭ್ಯವಾಗದ ಕಾರಣ ಅಧಿಕೃತವಾಗಿ ಅವಳ ವಯಸ್ಸು 100 ಆಗಿದೆ ಎಂದು ತೋರಿಸಲು ನಮಗೆ ಸಾಧ್ಯವಾಗುತ್ತಿಲ್ಲ,’ ಎಂದು ಪನ್ನಾ ಟೈಗರ್ ರಿಸರ್ವ್ ನಿರ್ದೇಶಕ ಬಜೇಂದ್ರ ಝಾ ಹೇಳುತ್ತಾರೆ.

ಇದನ್ನೂ ಓದಿ: 40ರ ನಂತರ ಹೃದಯದ ಆರೋಗ್ಯವನ್ನು ಹೇಗೆ ರಕ್ಷಿಸುವುದು? ಆಯುರ್ವೇದ ತಜ್ಞರು ಏನು ಸಲಹೆ ನೀಡುತ್ತಾರೆ?

ವತ್ಸಲಾಳ ವಯಸ್ಸು ದೃಢೀಕರಿಸಲು ಕೇರಳದಿಂದ ದಾಖಲಾತಿಗಳನ್ನು ಪಡೆಯುವ ಪ್ರಯತ್ನ ಜಾರಿಯಲ್ಲಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ತನ್ನ 86 ನೇ ವಯಸ್ಸಿನಲ್ಲಿ ಮರಣಿಸಿದ ಟೈವಾನ್ ದೇಶದ ಲಿನ್ ವ್ಯಾಂಗ್ ಹೆಸರಿನ ಆನೆ ಇದುವರೆಗಿನ ಅತ್ಯಂತ ದೀರ್ಘಾಯುಷಿ ಆನೆಯಂದು ಅಂತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದೆ.
ಆನೆಯೊಂದರ ಸರಾಸರಿ ವಯಸ್ಸು 60-70 ರೇಂಜ್ ನಲ್ಲಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.