40ರ ನಂತರ ಹೃದಯದ ಆರೋಗ್ಯವನ್ನು ಹೇಗೆ ರಕ್ಷಿಸುವುದು? ಆಯುರ್ವೇದ ತಜ್ಞರು ಏನು ಸಲಹೆ ನೀಡುತ್ತಾರೆ?

ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೃದಯದ ಅರೋಗ್ಯ ನೋಡಿಕೊಳ್ಳುವುದಕ್ಕಿಂತ ಹೆಚ್ಚು ಮುಖ್ಯವಾದುದು ಯಾವುದೂ ಇಲ್ಲ. 45 ವರ್ಷ ವಯಸ್ಸಿನ ನಂತರ ಆರೋಗ್ಯಕರ ಹೃದಯಕ್ಕಾಗಿ ತಜ್ಞರು ನೀಡಿದ ಆಯುರ್ವೇದ ಸಲಹೆಗಳನ್ನು ಅನುಸರಿಸಿ. ಆರೋಗ್ಯವನ್ನು ಕಾಪಾಡಿಕೊಳ್ಳಿ ಯಾವ ರೀತಿಯ ಸಲಹೆ ಅನುಸರಿಸಬೇಕು ಇಲ್ಲಿದೆ ಮಾಹಿತಿ.

40ರ ನಂತರ ಹೃದಯದ ಆರೋಗ್ಯವನ್ನು ಹೇಗೆ ರಕ್ಷಿಸುವುದು? ಆಯುರ್ವೇದ ತಜ್ಞರು ಏನು ಸಲಹೆ ನೀಡುತ್ತಾರೆ?
40ರ ನಂತರ ಹೃದಯದ ಆರೋಗ್ಯ
Follow us
| Updated By: ಅಕ್ಷತಾ ವರ್ಕಾಡಿ

Updated on:Apr 06, 2023 | 12:03 PM

ಹೃದಯದ ಆರೋಗ್ಯ ನೋಡಿಕೊಳ್ಳುವುದಕ್ಕಿಂತ ಹೆಚ್ಚು ಮುಖ್ಯವಾದುದು ಯಾವುದೂ ಇಲ್ಲ. 45 ವರ್ಷ ವಯಸ್ಸಿನ ನಂತರ ಆರೋಗ್ಯಕರ ಹೃದಯಕ್ಕಾಗಿ ತಜ್ಞರು ನೀಡಿದ ಆಯುರ್ವೇದ ಸಲಹೆಗಳನ್ನು ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಅದಕ್ಕೆ ಮನೆ ಮದ್ದು ಮತ್ತು ಆಯುರ್ವೇದವೇ ಒಳ್ಳೆಯ ಔಷದಿ. ಹೃದಯವು ಜೀವಿತಾವಧಿಯಲ್ಲಿ 2.5 ಬಿಲಿಯನ್ ಬಾರಿ ಬಡಿದುಕೊಳ್ಳುತ್ತದೆ. ದೇಹದಾದ್ಯಂತ ಸರಾಸರಿ ಲಕ್ಷಾಂತರ ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ. ಪ್ರಮುಖ ಕಾರ್ಯನಿರ್ವಹಣೆಗಾಗಿ ನಿಮ್ಮ ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?

ಅಧಿಕ ರಕ್ತದೊತ್ತಡ, ಅತಿಯಾದ ಕೊಲೆಸ್ಟ್ರಾಲ್ ನಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಏನು ಮಾಡಬಹುದು. ಇಲ್ಲವಾದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಆಯುರ್ವೇದ ವೈದ್ಯ ಮತ್ತು ಸ್ವಾಸ್ಥ್ಯ ತರಬೇತುದಾರ ವರ ಯನಮೀಂದ್ರ ಅವರು ಹೃದಯವು ಓಜಸ್ (ನಮ್ಮ ರೋಗನಿರೋಧಕ ಶಕ್ತಿ, ಶಕ್ತಿ ಮತ್ತು ಸಂತೋಷವನ್ನು ಆಳುವ ಪ್ರಮುಖ ಶಕ್ತಿ) ನೆಲೆಸುವ ಸ್ಥಳವಾಗಿದೆ ಎನ್ನುತ್ತಾರೆ. ಹಾಗಾದರೆ ಏನು ಮಾಡಬೇಕು ಇಲ್ಲಿದೆ ಮಾಹಿತಿ.

ಪ್ರತಿದಿನ ನಡಿಗೆ ಅವಶ್ಯ:

ದಿನಕ್ಕೆ ಸರಾಸರಿ 30 ನಿಮಿಷಗಳ ನಡಿಗೆಯು ನಿಮ್ಮ ಹೃದಯ ಬಡಿತದ ಅಪಾಯವನ್ನು 40% ರಷ್ಟು ಕಡಿಮೆ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

ಅಡುಗೆ ಎಣ್ಣೆ ಬಳಸುವಾಗ ಎಚ್ಚರ:

ಅಡುಗೆಯಲ್ಲಿ ತರಕಾರಿಗಳು ಮತ್ತು ಬೀಜದ ಎಣ್ಣೆಗಳಾದ ಕೆನೋಲಾ, ತಾಳೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಿ. ಇವು ದೇಹಕ್ಕೆ ಬೇಡದ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತವೆ ಇದರಿಂದ ಹೃದಯ ಅರೋಗ್ಯ ಹಾಳಾಗುತ್ತದೆ. ಅಲ್ಲದೆ ಈ ಎಣ್ಣೆ ಹೆಚ್ಚು ಸಂಸ್ಕರಿಸಿದ ಮತ್ತು ಉರಿಯೂತದ ಅಪಾಯವನ್ನು ಹೊಂದಿರುವ ತೈಲಗಳಾಗಿವೆ. ನಿಮ್ಮ ಅಡುಗೆಯಲ್ಲಿ ಆಲಿವ್ ಎಣ್ಣೆ, ತುಪ್ಪ ಮತ್ತು ಎಳ್ಳಿನ ಎಣ್ಣೆಯಂತಹ ಆರೋಗ್ಯಕರ ಎಣ್ಣೆ ಬಳಸಿ. ಇವು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನು ಓದಿ: ಸಸ್ಯಾಹಾರಿಗಳಿಗೆ ವಿಟಮಿನ್ ಬಿ 12 ಸಮೃದ್ಧವಾಗಿರುವ 5 ಆಹಾರಗಳು

ಹುಳಿ, ಉಪ್ಪು, ಕಾರದ ಬಗ್ಗೆ ವಿಶೇಷ ಗಮನ ಅಗತ್ಯ:

  • ಹುಳಿ ಆಹಾರಗಳನ್ನು ಸ್ವಭಾವತಃ ಕಾರ್ಡಿಯೋಪ್ರೊಟೆಕ್ಟಿವ್ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಆಂಟಿ-ಆಕ್ಸಿಡೆಂಟ್-ಭರಿತ ಆಹಾರಗಳಾದ ಆಮ್ಲಾ ಮತ್ತು ಚೆರ್ರಿಗಳನ್ನು ಸೇರಿಸುವುದು ಒಳ್ಳೆಯದು.
  • ಮಸಾಲೆಗಳು: ಬೆಳ್ಳುಳ್ಳಿ, ಕೊತ್ತಂಬರಿ, ಖರ್ಜೂರ ಮತ್ತು ಒಣದ್ರಾಕ್ಷಿಗಳ ಬಳಕೆಯನ್ನು ಆಯುರ್ವೇದ ಶಿಫಾರಸು ಮಾಡುತ್ತದೆ. ಪ್ರತಿ ಋತುವಿನಲ್ಲಿ ಅವುಗಳನ್ನು ಆಹಾರದಲ್ಲಿ ಸೇರಿಸಿ ತಿನ್ನಬಹುದು.
  • ಉಪ್ಪು: ಕಲ್ಲು ಉಪ್ಪು ನಮ್ಮ ಹೃದಯಕ್ಕೆ ಉತ್ತಮವಾದ ಲವಣಗಳಲ್ಲಿ ಒಂದಾಗಿದೆ. ಆದರೆ ಹೆಚ್ಚು ಸಂಸ್ಕರಿಸಿದ ಉಪ್ಪು ಬೆರೆಸಿದ ಆಹಾರಗಳನ್ನು ತಪ್ಪಿಸಿ.

ಹಲ್ಲುಗಳ ಆರೋಗ್ಯದ ಬಗ್ಗೆ ಇರಲಿ ಎಚ್ಚರ:

ಕಳಪೆಯಾದ ಬಾಯಿಯ ಆರೋಗ್ಯವು ಹೃದ್ರೋಗಕ್ಕೆ ಸಂಬಂಧಿಸಿದೆ. ಒಸಡುಗಳ ಉರಿಯೂತವು ಹೃದಯದೊಳಗೆ ಮುಚ್ಚಿಹೋಗಿರುವ ಅಪಧಮನಿಗಳಿಗೆ ಸಂಬಂಧಿಸಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹಲ್ಲಿನ ದಿನಚರಿಯನ್ನು ಬೆಚ್ಚಗಿನ ನೀರಿಂದ ಆರಂಭಿಸಿ. ಅದು ನಿಮ್ಮ ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ಹೃದಯಾಘಾತವನ್ನು ಸಾಮಾನ್ಯವಾಗಿ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಸಮಯೋಚಿತ ನಿರ್ವಹಣೆ ಅಗತ್ಯ ನಿಮ್ಮ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ. ನಿಮ್ಮ ಆರೋಗ್ಯ ನಿಮ್ಮ ಕೈಲಿರಲಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:03 pm, Thu, 6 April 23