ವಿಶ್ವದ ಅತ್ಯಂತ ಹಿರಿಯ ಮಹಿಳೆ ಫ್ರೆಂಚ್ ನನ್ ರ‍್ಯಾಂಡನ್ ಲೂಸಿಲಿ 118 ನೇ ವಯಸ್ಸಲ್ಲಿ ವಿಧಿವಶ

ಅಮೆರಿಕದ ನ್ಯೂ ಯಾರ್ಕ್ ನಗರದಲ್ಲಿ ಮೊದಲ ಸಬ್ ವೇ ಆರಂಭಗೊಂಡಾಗ ಮತ್ತು ಮೊಟ್ಟ ಮೊದಲ ಟೂರ್ ಡಿ ಫ್ರಾನ್ಸ್ ಆಯೋಜನೆಗೊಂಡ ಸಂದರ್ಭದಲ್ಲಿ ರ‍್ಯಾಂಡನ್ ಹುಟ್ಟಿದ್ದರು.

ವಿಶ್ವದ ಅತ್ಯಂತ ಹಿರಿಯ ಮಹಿಳೆ ಫ್ರೆಂಚ್ ನನ್ ರ‍್ಯಾಂಡನ್ ಲೂಸಿಲಿ 118 ನೇ ವಯಸ್ಸಲ್ಲಿ ವಿಧಿವಶ
ಲೂಸಿಲಿ ರ‍್ಯಾಂಡನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 18, 2023 | 12:09 PM

ಮರ್ಸಿಲ್ಲೆ, ಫ್ರಾನ್ಸ್: ವಿಶ್ವದ ಅತ್ಯಂತ ದೀರ್ಘಾಯುಷಿ ಎನಿಸಿಕೊಂಡಿದ್ದ ಫ್ರಾನ್ಸ್ ದೇಶದ ನನ್ (ಕ್ರೈಸ್ತ ಸನ್ಯಾಸಿನಿ) ಲೂಸಿಲಿ ರ‍್ಯಾಂಡನ್ (Lucile Randon) ತಮ್ಮ 118 ನೇ ವಯಸ್ಸಿನಲ್ಲಿ ನಿಧನ ಹೊಂದಿದರೆಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸಿಸ್ಟರ್ ಆಂದ್ರೆ (Sister Andre) ಅಂತಲೇ ಜನಪ್ರಿಯರಾಗಿದ್ದ ರ‍್ಯಾಂಡನ್ ಫ್ರಾನ್ಸ್ ದಕ್ಷಿಣ ಭಾಗದ (Southern France) ಪ್ರಾಂತ್ಯವೊಂದರಲ್ಲಿ ಫೆಬ್ರುವರಿ 11, 1904 ರಂದು ಜನಿಸಿದ್ದರು. ಅವರು ಹುಟ್ಟಿದ ಒಂದು ದಶಕದ ಬಳಿಕ ಮೊದಲ ಜಾಗತಿಕ ಯುದ್ಧ ಆರಂಭವಾಗಿತ್ತು.

ರ‍್ಯಾಂಡನ್ ಅವರು ಟೌಲನಲ್ಲಿರುವ ತಮ್ಮ ನರ್ಸಿಂಗ್ ಹೋಮ್ ನಲ್ಲಿ ನಿದ್ರಿಸುತ್ತಿರುವಾಗಲೇ ಕೊನೆಯುಸಿರೆಳೆದರು ಎಂದು ಬಾತ್ಮೀದಾರ ಡೇವಿಡ್ ಟ್ಯಾವೆಲ್ಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ

‘ಇದು ಬಹಳ ವಿಷಾದಕರ ಮತ್ತು ದುಃಖಕರ ಕ್ಷಣ, ಆದರೆ ತಮ್ಮ ಪ್ರೀತಿಯ ಸಹೋದರನನ್ನು ಸೇರಿಕೊಳ್ಳುವ ತವಕ ಅವರಲ್ಲಿತ್ತು. ರ‍್ಯಾಂಡನ್ ಅವರ ಪಾಲಿಗೆ ಇದು ಮುಕ್ತಿ,’ ಎಂದು ಸೆಂಟೆ-ಕ್ಯಾಥರೀನ್-ಲೇಬರ್ ನರ್ಸಿಂಗ್ ಹೋಮ್ ನ ವಕ್ತಾರರಾಗಿರುವ ಟ್ಯಾವೆಲ್ಲ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕದ ನ್ಯೂ ಯಾರ್ಕ್ ನಗರದಲ್ಲಿ ಮೊದಲ ಸಬ್ ವೇ ಆರಂಭಗೊಂಡಾಗ ಮತ್ತು ಮೊಟ್ಟ ಮೊದಲ ಟೂರ್ ಡಿ ಫ್ರಾನ್ಸ್ ಆಯೋಜನೆಗೊಂಡ ಸಂದರ್ಭದಲ್ಲಿ ರ‍್ಯಾಂಡನ್ ಹುಟ್ಟಿದ್ದರು.

ಇದನ್ನೂ ಓದಿ:  Karnataka High Court: ಕಂಪನಿಯ ಕೃತ್ಯಗಳಿಗೆ ಉದ್ಯೋಗಿಯನ್ನು ಮಾತ್ರ ಆರೋಪಿಯಾಗಿಸುವಂತಿಲ್ಲ: ಹೈಕೋರ್ಟ್ ಆದೇಶ 

ನರ್ಸಿಂಗ್ ಹೋಮ್ ನಲ್ಲಿನ ಅವರ ದಿನಚರಿ ಪ್ರಾರ್ಥನೆ ಮಾಡುವುದು, ಊಟ-ತಿಂಡಿ, ತಮ್ಮನ್ನು ಬೇಟಿಯಾಗಲು ಬಂದವರ ಜೊತೆ ಮಾತು ಮತ್ತು ಆಸ್ಪತ್ರೆಯ ಸಿಬ್ಬಂದಿ ಜೊತೆ ಸಮಾಲೋಚನೆಯನ್ನು ಒಳಗೊಂಡಿರುತ್ತಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ