ಮೊದಲ ಮದುವೆ ವಾರ್ಷಿಕೋತ್ಸವ ಆಚರಿಸಲು ಪತ್ನಿಯೊಂದಿಗೆ ಮೆಕ್ಸಿಕೋ ತೆರಳಿದ್ದ ಯುಎಸ್ ವಕೀಲ ಹೆಣವಾಗಿ ಪತ್ತೆ!
2017 ರಲ್ಲಿ ಲಾ ಪರೀಕ್ಷೆ ಪಾಸು ಮಾಡಿದ ಬಳಿಕ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿ ಎಲಿಯಟ್ ಮತ್ತು ಕಿಮ್ ಸಾರ್ವಜನಿಕರಿಗಾಗಿ ಸಂಕಲ್ಪಭರಿತ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂದು ರಾಡ್ರಿಗಜ್ ಅವರ ಪೋಸ್ಟ್ ತಿಳಿಸುತ್ತದೆ.
ಅಮೆರಿಕದ 33-ವರ್ಷ-ವಯಸ್ಸಿನ ವಕೀಲರೊಬ್ಬರು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯದ (Baja California) ರೊಸಾರಿಟೊ ಬೀಚ್ ನಲ್ಲಿರುವ ಲಾಸದ ರೊಕಾಸ್ ರೆಸಾರ್ಟ್ ಮತ್ತು ಸ್ಪಾನಲ್ಲಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವ (wedding anniversary) ಆಚರಿಸಲು ಪತ್ನಿಯೊಂದಿಗೆ ತೆರಳಿದ್ದಾಗ, ಕಳೆದ ಶನಿವಾರದಂದು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಸದಸ್ಯರು ವಕೀಲರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮೃತ ವಕೀಲನ ಹೆಸರು ಎಲಿಯಟ್ ಬ್ಲೇರ್ (Elliot Blair) ಆಗಿದ್ದು ಅವರು ಯುಎಸ್ ಕ್ಯಾಲಿಫೋರ್ನಿಯಾದ ಅರೇಂಜ್ ಕೌಂಟಿಯ ನಿವಾಸಿಯಾಗಿದ್ದರು. ಅವರ ದೇಹ ನೋಡಿದ ಹೋಟೆಲ್ ಸಿಬ್ಬಂದಿ ಬೆಳಗಿನ ಜಾವ 1.15 ನಿಮಿಷಕ್ಕೆ ತುರ್ತು ಸೇವೆಗಳ ಕಚೇರಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಸ್ಥಳೀಯ ಮಾಧ್ಯಮ ಪತ್ರುಲ್ಲಾ 646 ಕಾಡಿಗೊ ರೋಜೊಗೆ ತಿಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ ಎಲಿಯಟ್ ತಮ್ಮ ರೂಮಿನಿಂದ ಕೆಳಗೆ ಬಿದ್ದಿದ್ದಾರೆ ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ ವಕೀಲ ಸಾಯುವ ಮೊದಲು ಮದ್ಯ ಸೇವನೆ ಮಾಡಿದ್ದರು.
ಸಹಜ ಸಾವಲ್ಲ?
ಆದರೆ, ಎಲಿಯಟ್ ಕುಟುಂಬದ ಸದಸ್ಯರು ಎಲ್ಲ ಆವೃತ್ತಿಗಳನ್ನು ತಳ್ಳಿಹಾಕಿದ್ದು ಪತ್ನಿಯೊಂದಿಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಿದ್ದ ಅವರ ಮೇಲೆ ಅಪ್ರಚೋದಿತ ದಾಳಿ ನಡೆದಿದೆ ಎಂದು ಅವರು ಹೇಳುತ್ತಿದ್ದಾರೆ.
ಗೋಫೌಂಡ್ ಮೀ ಪೇಜ್ ನಲ್ಲಿ ಎಲಿಯಟ್ ಅವರ ಸಹೋದ್ಯೋಗಿಯಾಗಿದ್ದ ಅನ್ನೀ ರಾಡ್ರಿಗೆಜ್, ‘ಅವನು ನನ್ನ ಚಿಕ್ಕ ತಮ್ಮನಂತಿದ್ದ,’ ಎಂದಿದ್ದಾರೆ. ಮುಂದುವರಿದು ಹೇಳಿರುವ ಅವರು, ಜನೆವರಿ 14, 2023 ರಂದು ಎಲಿಯಟ್ ಬ್ಲೇರ್ ಮತ್ತವನ ಪತ್ನಿ ಕಿಮ್ ಮೆಕ್ಸಿಕೋದ ರೊಸಾರಿಟೋ ನಲ್ಲಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿದ್ದರು. ಆ ಸಮಯದಲ್ಲೇ ಎಲಿಯಟ್ ನನ್ನು ಕೊಲ್ಲಲಾಗಿದೆ,’ ಎಂದಿದ್ದಾರೆ.
ಅವನನ್ನು ಕೊಲ್ಲಲಾಗಿದೆ
‘ಎಲ್ಲರಿಗೂ ಹೆಚ್ಚುವರಿ ಮಾಹಿತಿ ನೀಡುವ ಉದ್ದೇಶ ನಮಗಿತ್ತಾದರೂ ಮೆಕ್ಸಿಕೋದ ಪೊಲೀಸ್ ಅಧಿಕಾರಿಗಳಿಂದ ನಮಗೆ ಲಭ್ಯವಾಗಿದ್ದು ಸೀಮಿತ ಮಾಹಿತಿ ಮಾತ್ರ. ಭೀಕರವಾದ ಅಪರಾಧವೊಂದಕ್ಕೆ ಅವನು ಬಲಿಯಾಗಿದ್ದಾನೆ. ಅವನ ಕುಟುಂಬ ಸದಸ್ಯರು ಅಮೆರಿಕದ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ,’ ಎಂದು ರಾಡ್ರಿಗೆಜ್ ಹೇಳಿದ್ದಾರೆ.
ಫಂಡ್ ರೇಸರ್ ಗಾಗಿ ಕಳಿಸಿದ ಮೆಸೇಜ್ ಬ್ಲೇರ್ ಅವರ ಫ್ಯಾಮಿಲಿ ಅನುಮೋದನೆ ನೀಡಿದೆ. ಸೋಮವಾರದ ವರೆಗೆ $96,487 (ಸುಮಾರು ರೂ. 80 ಲಕ್ಷ) ಸಂಗ್ರಹವಾಗಿದ್ದು ರೂ. ಒಂದು ಕೋಟಿ ಸಂಗ್ರಹಿಸುವ ನಿರೀಕ್ಷೆಯಿದೆ ಎಂದು ಆಕೆ ಹೇಳಿದ್ದಾರೆ.
2017 ರಲ್ಲಿ ಲಾ ಪರೀಕ್ಷೆ ಪಾಸು ಮಾಡಿದ ಬಳಿಕ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿ ಎಲಿಯಟ್ ಮತ್ತು ಕಿಮ್ ಸಾರ್ವಜನಿಕರಿಗಾಗಿ ಸಂಕಲ್ಪಭರಿತ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂದು ರಾಡ್ರಿಗಜ್ ಅವರ ಪೋಸ್ಟ್ ತಿಳಿಸುತ್ತದೆ. ‘ತಮ್ಮ ಹೃದಯಸ್ಪರ್ಶಿ ಸಂದೇಶದಲ್ಲಿ ಅವರು: ಎಲಿಯಟ್ ಒಬ್ಬ ಸಹಾನುಭೂತಿಯುಳ್ಳ ಮತ್ತು ಬಡ ಕಕ್ಷಿದಾರರಿಗೆ ತನ್ನ ಬದುಕನ್ನೇ ಮುಡುಪಾಗಿಟ್ಟ ವಕೀಲನಾಗಿದ್ದ. ಅವನು ತಾಳ್ಮೆಯ ಪ್ರತಿರೂಪವಾಗಿದ್ದ ಮತ್ತು ಅಪಾರ ಕನಿಕರ ಮತ್ತು ಕರುಣೆಯುಳ್ಳ ವ್ಯಕ್ತಿಯಾಗಿದ್ದ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು!
ಕರುಣಾಮಯಿ ಮತ್ತು ಪ್ರತಿಭಾವಂತನಾಗಿದ್ದ
‘ನಮ್ಮ ಎಲ್ಲ ವಕೀಲರ ಪೈಕಿ ಅವನೇ ಹೆಚ್ಚು ಪ್ರತಿಭಾವಂತನಾಗಿದ್ದ ಮತ್ತು ನಮ್ಮ ಕಚೇರಿಯ ಸಿಬ್ಬಂದಿ ಹಾಗೂ ಅಸಂಖ್ಯಾತ ಜನ ಮತ್ತು ಆರೇಂಜ್ ಕೌಂಟಿಯ ಕಾನೂನು ಸಮುದಾಯ ಅವನನ್ನು ಬಹಳ ಇಷ್ಟಪಡುತಿತ್ತು. ಅವನ ಸಾವಿನ ಸುದ್ದಿ ಕೇಳಿ ನಮ್ಮ ಹೃದಯ ಒಡೆದಂತಾಗಿದೆ,’ ಎಂದು ರಾಡ್ರಿಗಜ್ ಹೇಳಿದ್ದಾರೆ.
ಬಾಜಾ ಕ್ಯಾಲಿಫೋರ್ನೀಯಾದ ಅಟಾರ್ನಿ ಜನಲರ್ ಕಚೇರಿಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತನಿಖೆ ಜಾರಿಯಲ್ಲಿದೆ.
ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ