Karnataka High Court: ಕಂಪನಿಯ ಕೃತ್ಯಗಳಿಗೆ ಉದ್ಯೋಗಿಯನ್ನು ಮಾತ್ರ ಆರೋಪಿಯಾಗಿಸುವಂತಿಲ್ಲ: ಹೈಕೋರ್ಟ್ ಆದೇಶ
ಕದ್ದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಉದ್ಯೋಗಿಗಳ ಮೇಲೆ ಮಾತ್ರವೇ ಪ್ರಾತಿನಿಧಿಕ ಹೊಣೆ ಸರಿಯಲ್ಲ ಎಂದ ಹೈಕೋರ್ಟ್, ಉದ್ಯೋಗಿಗಳ ಮೇಲಿನ ಆರೋಪಪಟ್ಟಿ ರದ್ದುಪಡಿಸಿತು.
ಬೆಂಗಳೂರು: ಕದ್ದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪನಿಯ (Attica Gold Company) ಇಬ್ಬರು ಉದ್ಯೋಗಿಗಳ ವಿರುದ್ಧ ಸಲ್ಲಿಸಿದ್ದ ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದ್ದು, ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ. ಕಂಪನಿಯನ್ನು ಕೈಬಿಟ್ಟು ಉದ್ಯೋಗಿಗಳನ್ನು ಮಾತ್ರ ಆರೋಪಿಯಾನ್ನಾಗಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ.ಹೇಮಂತ್ ಚಂದನಗೌಡರ್ ಅವರು ಚಾರ್ಜ್ಶೀಟ್ ಅನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.
ಕಳವು ಮಾಡಿದ ಒಡವೆ ಖರೀದಿ ಮಾಡಿದ ಆರೋಪ ಹೊರಿಸಿ ಅಟ್ಟಿಕಾ ಗೋಲ್ಡ್ ಕಂಪನಿಯ ಇಬ್ಬರು ಉದ್ಯೋಗಿಗಳ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ವಿಚಾರಣೆ ನಡೆಸಿದ ಪೊಲೀಸರು ಇಬ್ಬರು ಉದ್ಯೋಗಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಕಂಪನಿಯನ್ನು ಹೊರಗಿಟ್ಟು ಕೇವಲ ಉದ್ಯೋಗಿಗಳನ್ನು ಮಾತ್ರ ಆರೋಪಿ ಸ್ಥಾನದಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಕಾರು ಚಾಲಕನನ್ನು ದರದರನೆ 1ಕಿ.ಮೀ ಎಳೆದೊಯ್ದ ಬೈಕ್ ಸವಾರ: ಇಲ್ಲಿದೆ ಭಯಾನಕ ವಿಡಿಯೋ
ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಕಂಪನಿಯನ್ನು ಹೊರಗಿಟ್ಟು ಉದ್ಯೋಗಿಗಳ ಮೇಲೆ ಮಾತ್ರವೇ ಪ್ರಾತಿನಿಧಿಕ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿ ಉದ್ಯೋಗಿಗಳ ವಿರುದ್ಧ ಸಲ್ಲಿಕೆಯಾಗಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?
ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣಗಳು ಕಳವಾಗಿದ್ದವು. ಈ ಚಿನ್ನಾಭರಣಗಳನ್ನು ತಲೆಮರೆಸಿಕೊಂಡಿದ್ದ ಆರೋಪಿ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಿದ್ದ. ಪ್ರಕರಣ ಸಂಬಂಧ ಮಂಡ್ಯದ ಬೆಳ್ಳೂರು ಗ್ರಾಮದ ಜೆ.ಮನೋಜ್ ಮತ್ತು ಚಿನ್ನ ಖರೀದಿಸಿದ ತಿಲಕ್ನಗರದ ಶಿವು ಎಂಬವರನ್ನು ಪೊಲೀಸರು ಬಂಧಿಸಿ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದರು.
ಮನೆ ಕೆಲಸ ಮಾಡಿಕೊಂಡಿದ್ದ ಆರೋಪಿ ಮಾಲೀಕರ ವಿಶ್ವಾಸಕ್ಕೆ ಪಾತ್ರನಾಗಿದ್ದನು. ಅದರಂತೆ ಮನೆಯವರು ಇಲ್ಲದಿದ್ದಾಗ ಆರೋಪಿಯೇ ಮನೆಯನ್ನು ನೋಡಿಕೊಳ್ಳುತ್ತಿದ್ದನು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮನೆಯಲ್ಲಿದ್ದ ಒಡವೆಗಳನ್ನು ಕದ್ದು ಮಾರಾಟ ಮಾಡಿದ್ದ. ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ. ಇದು ಮನೆ ಮಾಲೀಕರ ಅನುಮಾನಕ್ಕೆ ಕಾರಣವಾಗಿದ್ದು, ವಿಚಾರಿಸಿದ ನಂತರ ಆರೋಪಿ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Tue, 17 January 23