AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕೆರೆಯಲ್ಲಿ ಪತ್ತೆಯಾದ ಅಪರಿಚಿತ ಶವದ ಹಿಂದೆ ರೋಚಕ ಟ್ವಿಸ್ಟ್; ಮೃತನ ಕೈ ಮೇಲಿದ್ದ ಹಚ್ಚೆಯಿಂದ ಸಿಕ್ಕಿಬಿದ್ದ ಹಂತಕರು

ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಬಳಿಕ ಶವದ ಗುರುತು ಪತ್ತೆಗೆ ಮುಂದಾದ ಆವಲಹಳ್ಳಿ ಪೊಲೀಸರಿಗೆ ಮೃತನ ಕೈ ಮೇಲಿದ್ದ ಹಚ್ಚೆಗಳು ಸಹಾಯ ಮಾಡಿವೆ. ಹಚ್ಚೆ ಮೂಲಕ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ.

ಬೆಂಗಳೂರಿನ ಕೆರೆಯಲ್ಲಿ ಪತ್ತೆಯಾದ ಅಪರಿಚಿತ ಶವದ ಹಿಂದೆ ರೋಚಕ ಟ್ವಿಸ್ಟ್; ಮೃತನ ಕೈ ಮೇಲಿದ್ದ ಹಚ್ಚೆಯಿಂದ ಸಿಕ್ಕಿಬಿದ್ದ ಹಂತಕರು
ಮೃತ ಗೋಪಾಲ
TV9 Web
| Updated By: ಆಯೇಷಾ ಬಾನು|

Updated on: Jan 18, 2023 | 8:10 AM

Share

ಬೆಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಯುವಕನ ಶವ ಅಮಾನಿಕೆರೆಯಲ್ಲಿ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯ ಶವವೆಂದು ತನಿಖೆಗೆ ಇಳಿದ ಪೊಲೀಸರು ಶವದ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮೊದಲು ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಹಾಕಲಾಗಿದೆ ಎಂಬ ಭಯಾನಕ ಸಂಗತಿ ತನಿಖೆ ವೇಳೆ ಬಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ತಾನು ಪ್ರೀತಿಸಿದ ಹುಡುಗಿಯನ್ನು ಕಿಚಾಯಿಸಿದಕ್ಕೆ ಕೊಲೆ ಮಾಡಿದ ಆರೋಪಿಗಳು

ನಂದಿನಿ ಲೇಔಟ್ ನಿವಾಸಿ, 30 ವರ್ಷದ ಗೋಪಾಲ ಎಂಬ ಯುವಕ ಹೊಸ ವರ್ಷದಂದು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ. ನಂತರ ಆರೇಳು ದಿನವಾದ್ರು ಮನೆಗೆ ಬಂದಿರಲಿಲ್ಲ. ಆಗ ಆತಂಕಕ್ಕೊಳಗಾದ ಕುಟುಂಬಸ್ಥರು ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಮತ್ತೊಂದೆಡೆ ಜನವರಿ 6ರಂದು ಅವಲಹಳ್ಳಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಶವ ನೋಡಿದ ಮೇಲೆ ಪೊಲೀಸರಿಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಹೀಗಾಗಿ ಶವದ ಹಿಂದೆ ತನಿಖೆಗೆ ಬಿದ್ದ ಪೊಲೀಸರು ಕೊಲೆಯ ಅಸಲಿ ಕಹಾನಿ ಪತ್ತೆ ಮಾಡಿದ್ದಾರೆ. ಶವ ಪತ್ತೆಯಾದ 24 ಗಂಟೆಯಲ್ಲಿ ಪೊಲೀಸರು ಅಸಲಿಯತ್ತು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಹಂತಕರು ಮೊದಲು ಬೇರೆಡೆ ಕೊಲೆ ಮಾಡಿ ಬಳಿಕ ಕೆರೆಯಲ್ಲಿ ಶವ ಎಸೆದು ಹೋಗಿದ್ದಾರೆ ಎಂದು ವಿಚಾರ ಬಯಲಾಗಿದೆ.

ಇದನ್ನೂ ಓದಿ: ಮೊದಲ ಮದುವೆ ವಾರ್ಷಿಕೋತ್ಸವ ಆಚರಿಸಲು ಪತ್ನಿಯೊಂದಿಗೆ ಮೆಕ್ಸಿಕೋ ತೆರಳಿದ್ದ ಯುಎಸ್ ವಕೀಲ ಹೆಣವಾಗಿ ಪತ್ತೆ!

ಮೃತನ ಕೈ ಮೇಲಿದ್ದ ಹಚ್ಚೆಯಿಂದ ಪತ್ತೆಯಾದ ಆರೋಪಿಗಳು

ಅಪರಿಚಿತ ಯುವಕನ ಶವ ಪತ್ತೆಯಾದ ಬಳಿಕ ಶವದ ಗುರುತು ಪತ್ತೆಗೆ ಮುಂದಾದ ಆವಲಹಳ್ಳಿ ಪೊಲೀಸರಿಗೆ ಮೃತನ ಕೈ ಮೇಲಿದ್ದ ಹಚ್ಚೆಗಳು ಸಹಾಯ ಮಾಡಿವೆ. ಹಚ್ಚೆ ಮೂಲಕ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ. ಮೃತ ವ್ಯಕ್ತಿ ಎಡಗೈ ಮೇಲೆ ಅಮ್ಮ, ಸಾರ ಅನ್ನೋ ಹಚ್ಚೆ ಹಾಕಿಸಿಕೊಂಡಿದ್ದ. ಹಾಗೂ ಬಲಗೈ ಮೇಲೆ ಯಶು ಎಂಬ ಹಚ್ಚೆ ಇತ್ತು. ಕೈನ ಒಂದೊಂದು ಬೆರಳ ಮೇಲೆ ಒಂದೊಂದು ಅಕ್ಷರ ಹಾಕಿಸಿಕೊಂಡಿದ್ದ. ಬೆರಳುಗಳ ಮೇಲೆ RADHE ಎಂದು ಹಾಕಿಸಿಕೊಂಡಿದ್ದ. ಹಚ್ಚೆ ಪತ್ತೆಯಾದ ಬಳಿಕ ಇವೆಲ್ಲವನ್ನ ಕಂಡ ಪೊಲೀಸರಿಗೆ ಇದೊಂದು ಪ್ರೀತಿ ವಿಚಾರ ಅನ್ನೋ ಸಂಶಯ ಮೂಡಿತ್ತು. ಆಗ ತನಿಖೆ ಮುಂದುವರಿಸಿದ ಆವಲಹಳ್ಳಿ ಪೊಲೀಸರಿಗೆ ಮೃತ ವ್ಯಕ್ತಿ ನಂದಿನಿ ಲೇಔಟ್ ನಿವಾಸಿ ಗೋಪಾಲ ಎಂಬುವುದು ತಿಳಿದು ಬಂದಿದೆ. ಬಳಿಕ ಹಂತಕರ ಸುಳಿವು ಸಿಕ್ಕಿದೆ.

ಆರೋಪಿ ಮುನಿಯಾ ಎಂಬಾತನ ಹುಡುಗಿಗೆ ಮೃತ ಗೋಪಾಲ ಕಿಚಾಯಿಸಿದ್ದನಂತೆ. ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ತನ್ನ ಹುಡುಗಿಯನ್ನೇ ಕಿಚಾಯಿಸಿದ್ದಾನೆ ಎಂಬ ಕೋಪ ಮುನಿಯನಿಗಿತ್ತು. ಅಲ್ಲದೆ ಮೃತ ಗೋಪಾಲ ಕೂಡ ಆಕೆಯ ಬೆನ್ನು ಬಿದ್ದಿದ್ದ. ಹೀಗಾಗಿ ಇದಕ್ಕೆ ಅಂತ್ಯ ಕಾಣಿಸಿಬೇಕೆಂದು ಹೊಸ ವರ್ಷದ ದಿನದಂದು ಕೆಲಸಕ್ಕೆ ಹೋಗಿದ್ದ ಗೋಪಾಲ ಕೆಲಸ ಮುಗಿಸಿ ಬರುವಾಗ ಆರೋಪಿಗಳು ಪಾರ್ಟಿ ಮಾಡಲು ಕರೆದುಕೊಂಡು ಹೋಗಿದ್ದಾರೆ. ಪಾರ್ಟಿ ಮಾಡಿ ಆರೋಪಿ ಮುನಿಯಾ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಗೋಪಾಲನ‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

ಮುನಿಯಾ ಮತ್ತು ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗೋಪಾಲನ ಕೊಲೆ ಮಾಡಿದ್ದಾರೆ. ಬಳಿಕ ಹೊಸಕೋಟೆ ಅಮಾನಿಕೆರೆಗೆ ಶವ ಎಸೆದು ಪರಾರಿಯಾಗಿದ್ದಾರೆ. ಸದ್ಯ ಮುನಿಯಾ ಸೇರಿ ಮೂವರನ್ನ ಆವಲಹಳ್ಳಿ ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ