ಕೃಷಿ ಚಟುವಟಿಕೆಗಳಿಗೆ ಸತತವಾಗಿ 5-ಗಂಟೆ ವಿದ್ಯುತ್ ಒದಗಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಅಭಾವ ಎದುರಾದರೆ ಕಬ್ಬು ಬೆಳೆಗಾರರು ಕಬ್ಬನ್ನು ಅರೆಯುವಾಗ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಖರೀದಿಸಿ ಕೃಷಿ ಚಟಿವಟಿಕೆಗಳಿಗೆ ಒದಗಿಸುವಂತೆ ಹೇಳಲಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, 2,000 ಮೆಗಾವ್ಯಾಟ್ ವಿದ್ಯುತ್ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ ಎಂದರು.
ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರೈತರ ಕೃಷಿ ಚಟುವಟಿಕೆಗಳಿಗೆ ತಡೆರಹಿತವಾಗಿ ವಿದ್ಯುತ್ ಪೂರೈಸುವಂತೆ (non stop power supply) ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು. ಬಿಜೆಪಿ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸರ್ಕಾರಗಳಿಗೆ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಸಾಧ್ಯವಾಗದೇ ಹೋದ ಕಾರಣ ತೀವ್ರ ಅಭಾವ ಎದುರಾಗಿದೆ, ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕೃಷಿ ಚಟುವಟಿಗಳಿಗೆ ಸಾಮಾನ್ಯವಾಗಿ 10,000 ಮೆಗಾವ್ಯಾಟ್ ಖರ್ಚಾಗುತ್ತಿದ್ದ ವಿದ್ಯುತ್ ಈ ಸಲ 16,000 ಮೆಗಾವ್ಯಾಟ್ ಖರ್ಚಾಗಿದೆ, ಆದಾಗ್ಯೂ ರೈತರಿಗೆ ಸತತವಾಗಿ 5-ಗಂಟೆ ಕಾಲ ತಡೆರಹಿತವಾಗಿ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳ ಸಭೆ ಕರೆದು ತಿಳಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು. ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಅಭಾವ ಎದುರಾದರೆ ಕಬ್ಬು ಬೆಳೆಗಾರರು ಕಬ್ಬನ್ನು ಅರೆಯುವಾಗ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಖರೀದಿಸಿ ಕೃಷಿ ಚಟಿವಟಿಕೆಗಳಿಗೆ ಒದಗಿಸುವಂತೆ ಹೇಳಲಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, 2,000 ಮೆಗಾವ್ಯಾಟ್ ವಿದ್ಯುತ್ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ