Kunfer Tunnel; ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಕೊರೆಯಲಾಗುತ್ತಿರುವ ಕುನ್ಫರ್ ಸುರಂಗಮಾರ್ಗ 10 ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ: ಅಧಿಕಾರಿಗಳು
ಭೌಗೋಳಿಕವಾಗಿ ಅತ್ಯಂತ ಕ್ಲಿಷ್ಟಕರವೆನಿಸುವ ಮತ್ತು ಹತ್ತು ಹಲವು ಸವಾಲುಗಳಿಂದ ಕೂಡಿದ ಭೂಮಿಯ ಮೇಲೆ ಕುನ್ಫರ್ ಸುರಂಗಮಾರ್ಗದ ನಿರ್ಮಾಣವಾಗುತ್ತಿದೆ.
ಶ್ರೀನಗರ: ಜಮ್ಮು ಮತ್ತು ಶ್ರೀನಗರ (Jammu-Srinagar) ನಡುವಿನ 270 ಕಿಮೀ ಉದ್ದ ರಾಷ್ಟ್ರೀಯ ಹೆದ್ದಾರಿಗೆ ಅನುಗುಣವಾಗಿ ಕೊರೆಯಲಾಗುತ್ತಿರುವ 924-ಮೀಟರ್ ಉದ್ದ ಕುನ್ಫರ್ ಸುರಂಗಮಾರ್ಗದ (Kumfer Tunnel) ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಜೋಡಿ ಟ್ಯೂಬ್ ಗಳ ಪೈಕಿ ಒಂದನ್ನು ಮುಂದಿನ ವಾರ ವಾಹರ ಸಂಚಾರಕ್ಕಾಗಿ ಮುಕ್ತ ಮಾಡಲಾಗುವುದು. ಪದೇಪದೆ ಭೂಕುಸಿತಕ್ಕೆ (Landslide) ಈಡಾಗುವ ರಾಮ್ಬಾಣ್ ಜಿಲ್ಲೆಯ ಪೀಡಾ ಮತ್ತು ಚಂದರ್ ಕೋಟ ನಡುವಿನ ಮೂರು ಕಿಮೀ ಪ್ರದೇಶದ ಮೂಲಕ ಹಾದುಹೋಗಬೇಕಾದ ಅನಿವಾರ್ಯತೆಯನ್ನು ಈ ಸುರಂಗ ಮಾರ್ಗ ತಪ್ಪಿಸುತ್ತದೆ.
ಇದನ್ನೂ ಓದಿ: Bengaluru Rains: ದೇವನಹಳ್ಳಿಯಲ್ಲಿ ಭಾರಿ ಮಳೆ: 19 ವಿಮಾನಗಳ ಲ್ಯಾಂಡಿಂಗ್ನಲ್ಲಿ ವ್ಯತ್ಯಯ, 8 ವಿಮಾನಗಳು ಚೆನ್ನೈಗೆ ವಾಪಸ್
‘ಒಂದು ವಾರದ ನಂತರ ಸುರಂಗಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗುವ ಆಶಾಭಾವನೆಯನ್ನು ನಾವು ತಳೆದಿದ್ದೇವೆ. ಸುರಂಗಮಾರ್ಗದಿಂದಾಗಿ ಜಿಲ್ಲೆಯ ಪೀಡಾ ಮತ್ತು ಚಂದರ್ ಕೋಟೆ ನಡುವಿನ ಅಂತರ ಮೂರು ಕಿಮೀ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ 2.9 ಕಿಮೀಗಳಷ್ಟು ಕಡಿಮೆಯಾಗಲಿದೆ,’ ಎಂದು ರಾಮ್ಬಾಣ್ ಜಿಲ್ಲಾಧಿಕಾರಿ ಮಸ್ಸರತ್ ಇಸ್ಲಾಂ ಹೇಳುತ್ತಾರೆ.
ಆಯಕಟ್ಟಿನ ಬಹಳ ಪ್ರಮುಖ ಹೆದ್ದಾರಿಯಲ್ಲಿ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯು ನಾಲ್ಕು ಪಥ ಯೋಜನೆಯ ಭಾಗವಾಗಿದೆ. ಇದು ಪೂರ್ಣಗೊಂಡ ಬಳಿಕ ಕಾಶ್ಮೀರಕ್ಕೆ ದೇಶದ ಉಳಿದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ಎಲ್ಲ ಬಗೆಯ ಹವಾಮಾಮಗಳಿಗೆ ಒಗ್ಗುವ ಏಕೈಕ ಮಾರ್ಗವೆನಿಸಲಿದೆ.
‘ನಮ್ಮ ಅಂದಾಜಿನ ಪ್ರಕಾರ ಮುಂದಿನ 10-12 ದಿನಗಳಲ್ಲಿ ವಾಹನಗಳು ಸುರಂಗಮಾರ್ಗದ ಮೂಲಕ ಸಂಚರಿಸಲಿವೆ,’ ಎಂದು ಗ್ಯಾಮನ್ ಇಂಡಿಯ ಲಿಮಿಟೆಡ್ ನ ಉಪ ಮಹಾ ನಿರ್ದೇಶಕ ಸಲ್ಮಾನ್ ಖಾನ್ ಹೇಳುತ್ತಾರೆ.
ಭೌಗೋಳಿಕವಾಗಿ ಅತ್ಯಂತ ಕ್ಲಿಷ್ಟಕರವೆನಿಸುವ ಮತ್ತು ಹತ್ತು ಹಲವು ಸವಾಲುಗಳಿಂದ ಕೂಡಿದ ಭೂಮಿಯ ಮೇಲೆ ಕುನ್ಫರ್ ಸುರಂಗಮಾರ್ಗದ ನಿರ್ಮಾಣವಾಗುತ್ತಿದೆ. ಭೂಕುಸಿತ ಉಂಟಾದಾಗ ಸುರಂಗಮಾರ್ಗಕ್ಕೆ ಯಾವುದೇ ರೀತಿಯ ಹಾನಿಯಾಗದ ಹಾಗೆ, ಒಳಗಡೆ ಸೋರಿಕೆಗಳು ಉಂಟಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ