Nokia C12 Plus: ಮಾರುಕಟ್ಟೆಗೆ ಬಂತು ಬಜೆಟ್ ಫ್ರೆಂಡ್ಲಿ ಹೊಸ ನೋಕಿಯಾ ಫೋನ್

Nokia C12 Plus: ಮಾರುಕಟ್ಟೆಗೆ ಬಂತು ಬಜೆಟ್ ಫ್ರೆಂಡ್ಲಿ ಹೊಸ ನೋಕಿಯಾ ಫೋನ್

ಕಿರಣ್​ ಐಜಿ
|

Updated on: Apr 05, 2023 | 10:10 AM

ನೋಕಿಯ ಕಂಪನಿ ಹೊಸದಾಗಿ ಸಿ ಸರಣಿಯಲ್ಲಿ ಬಿಡುಗಡೆ ಮಾಡಿರುವ ನೋಕಿಯಾ C12 ಪ್ಲಸ್, ಭಾರತದಲ್ಲಿ ಈಗ ₹7,999ಕ್ಕೆ ಲಭ್ಯವಾಗುತ್ತಿದೆ. ಹೊಸ ಫೋನ್ ವಿಶೇಷತೆಗಳ ಕುರಿತು ಮಾಹಿತಿ ಈ ವಿಡಿಯೊದಲ್ಲಿದೆ. ಅಲ್ಲದೆ, ಕ್ಯಾಶ್​ಬ್ಯಾಕ್, ಇಎಂಐ ಕೊಡುಗೆ ಕೂಡ ದೊರೆಯುತ್ತಿದ್ದು, ಹೊಸ ಫೋನ್ ಖರೀದಿಯ ಯೋಚನೆಯಲ್ಲಿದ್ದರೆ, ಈ ಕೊಡುಗೆಗಳ ಪ್ರಯೋಜನ ಪಡೆಯಬಹುದು.

ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೊಸ ಹೊಸ ಸ್ಮಾರ್ಟ್​ಫೋನ್​ಗಳದ್ದೇ ಸುದ್ದಿ. ನೂತನ ಸ್ಮಾರ್ಟ್​ಫೋನ್ ಬಿಡುಗಡೆಯ ಜತೆಗೆ, ವೈವಿಧ್ಯಮಯ ಕ್ಯಾಮೆರಾ ಅಪ್​ಗ್ರೇಡ್ ಕೂಡ ಈಗ ಲಭ್ಯವಾಗುತ್ತಿದೆ. ಅಲ್ಲದೆ, ಜನರ ಬಜೆಟ್ ದರಕ್ಕೆ ಅನುಗುಣವಾಗಿ ವಿವಿಧ ರೀತಿಯ ಫೀಚರ್ ಇರುವ ಸ್ಮಾರ್ಟ್​ಫೋನ್​ಗಳು ಖರೀದಿಗೆ ದೊರೆಯುತ್ತಿದೆ. ನೋಕಿಯ ಕಂಪನಿ ಹೊಸದಾಗಿ ಸಿ ಸರಣಿಯಲ್ಲಿ ಬಿಡುಗಡೆ ಮಾಡಿರುವ ನೋಕಿಯಾ C12 ಪ್ಲಸ್, ಭಾರತದಲ್ಲಿ ಈಗ ₹7,999ಕ್ಕೆ ಲಭ್ಯವಾಗುತ್ತಿದೆ. ಹೊಸ ಫೋನ್ ವಿಶೇಷತೆಗಳ ಕುರಿತು ಮಾಹಿತಿ ಈ ವಿಡಿಯೊದಲ್ಲಿದೆ. ಅಲ್ಲದೆ, ಕ್ಯಾಶ್​ಬ್ಯಾಕ್, ಇಎಂಐ ಕೊಡುಗೆ ಕೂಡ ದೊರೆಯುತ್ತಿದ್ದು, ಹೊಸ ಫೋನ್ ಖರೀದಿಯ ಯೋಚನೆಯಲ್ಲಿದ್ದರೆ, ಈ ಕೊಡುಗೆಗಳ ಪ್ರಯೋಜನ ಪಡೆಯಬಹುದು. ನೋಕಿಯಾ ಆನ್​ಲೈನ್ ಮತ್ತು ಇತರ ಪ್ರಮುಖ ರಿಟೇಲ್ ಮಳಿಗೆಗಳ ಮೂಲಕ ಕೊಡುಗೆಯ ಪ್ರಯೋಜನ ಪಡೆಯಬಹುದು. ಉಳಿದಂತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಕ್ಯಾಶ್​ಬ್ಯಾಕ್ ಹಾಗೂ ಇಎಂಐ ಪ್ರಯೋಜನವೂ ಲಭ್ಯವಾಗುತ್ತದೆ.