ಮಧ್ಯಪ್ರದೇಶದಲ್ಲಿ ಆಯಿಲ್ ಟ್ಯಾಂಕರ್ ಪಲ್ಟಿ; ಚೆಲ್ಲಿದ ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಭಾರಿ ಪ್ರಮಾಣದ ಪಾಮ್ ಆಯಿಲ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಎಣ್ಣೆಯು ರಸ್ತೆ ಮತ್ತು ಪಕ್ಕದ ಚರಂಡಿಗೆ ಹರಿದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ನೂರಾರು ಸಾರ್ವಜನಿಕರು, ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್‌ಗಳು, ಜಗ್‌ಗಳು, ಕವರ್‌ಗಳು ಮತ್ತು ದೊಡ್ಡ ಪಾತ್ರೆಗಳಲ್ಲಿ ಉಚಿತವಾಗಿ ಸಿಕ್ಕ ಎಣ್ಣೆಯನ್ನು ತುಂಬಿಕೊಳ್ಳಲು ಪೈಪೋಟಿಗೆ ಬಿದ್ದರು. ಸ್ಥಳೀಯರು ರಸ್ತೆಯಲ್ಲಿ ಹರಿಯುತ್ತಿದ್ದ ಎಣ್ಣೆಯನ್ನು ಕೈಯಿಂದಲೇ ಎತ್ತಿ ಪಾತ್ರೆಗಳಿಗೆ ತುಂಬಿಕೊಳ್ಳುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೋಪಾಲ್, ಆಗಸ್ಟ್ 24: ಮಧ್ಯಪ್ರದೇಶದಲ್ಲಿ ಪಾಮ್ ಆಯಿಲ್ ಅನ್ನು ಒಯ್ಯುತ್ತಿದ್ದ ಟ್ಯಾಂಕರ್ (Oil Tanker) ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಆಗ ಟ್ಯಾಂಕರ್‌ನಿಂದ ಸಾವಿರಾರು ಲೀಟರ್ ಎಣ್ಣೆ ರಸ್ತೆಯುದ್ದಕ್ಕೂ ಹರಿಯಲು ಪ್ರಾರಂಭಿಸಿದೆ. ಇದನ್ನು ಕಂಡು ಸ್ಥಳೀಯರು ಈ ವೇಳೆ ಸಿಕ್ಕಿದ್ದೇ ಚಾನ್ಸ್ ಎಂದು ಬಕೆಟ್, ಪಾತ್ರೆ ಮತ್ತು ಚೊಂಬುಗಳನ್ನು ಹಿಡಿದುಕೊಂಡು ಚೆಲ್ಲುತ್ತಿದ್ದ ಎಣ್ಣೆಯನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ.
ಭಾರಿ ಪ್ರಮಾಣದ ಪಾಮ್ ಆಯಿಲ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಎಣ್ಣೆಯು ರಸ್ತೆ ಮತ್ತು ಪಕ್ಕದ ಚರಂಡಿಗೆ ಹರಿದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ನೂರಾರು ಸಾರ್ವಜನಿಕರು, ಗಾಯಗೊಂಡ ಚಾಲಕನಿಗೆ ನೆರವಾಗುವ ಬದಲು ಬಕೆಟ್‌ಗಳು, ಜಗ್‌ಗಳು, ಕವರ್‌ಗಳು ಮತ್ತು ದೊಡ್ಡ ಪಾತ್ರೆಗಳಲ್ಲಿ ಉಚಿತವಾಗಿ ಸಿಕ್ಕ ಎಣ್ಣೆಯನ್ನು ತುಂಬಿಕೊಳ್ಳಲು ಪೈಪೋಟಿಗೆ ಬಿದ್ದರು. ಸ್ಥಳೀಯರು ರಸ್ತೆಯಲ್ಲಿ ಹರಿಯುತ್ತಿದ್ದ ಎಣ್ಣೆಯನ್ನು ಕೈಯಿಂದಲೇ ಎತ್ತಿ ಪಾತ್ರೆಗಳಿಗೆ ತುಂಬಿಕೊಳ್ಳುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ