Loading video

ಹುಬ್ಬಳ್ಳಿ: ಆರೋಪಿಗಳ ವಿಚಾರಣೆ ಮಾಡ್ತಿದ್ದಾಗಲೇ ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!

| Updated By: Ganapathi Sharma

Updated on: Apr 11, 2025 | 8:05 AM

ಸಂಪೂರ್ಣ ಶಿಥಿಲವಾಗಿರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿರುವಾಗಲೇ ಕುಸಿದು ಬಿದ್ದಿದೆ. ಅದೃಷ್ಟವಶಾತ್, ಸ್ವಲ್ಪದರಲ್ಲೇ ಪೊಲೀಸರು ಹಾಗೂ ಆರೋಪಿಗಳು ಅಪಾಯದಿಂದ ಬಚಾವಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲ್ಚಾವಣಿ ಕಾಂಕ್ರೀಟ್ ಕುಸಿದುಬಿದ್ದ ವಿಡಿಯೋ ಇಲ್ಲಿದೆ.

ಹುಬ್ಬಳ್ಳಿ, ಏಪ್ರಿಲ್ 11: ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾಗಲೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಕುಸಿತವಾಗಿದೆ. ಠಾಣೆಯ ಸಬ್ ಇನ್ಸ್​​ಪೆಕ್ಟರ್ ಕೊಠಡಿ ಮೇಲ್ಚಾವಣಿ ಕಾಂಕ್ರೀಟ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ