ಪುನೀತ್ ಸಮಾಧಿಗೆ ಕಡ್ಲೆಪುರಿ ಹಾರ ತಂದ ತುಮಕೂರಿನ ಅಜ್ಜಿ

| Updated By: sandhya thejappa

Updated on: Nov 08, 2021 | 12:24 PM

ಸುಮಿತ್ರಾ ಬಾಯಿ ಪುನೀತ್​ರನ್ನ ಹಲವು ಬಾರಿ ಭೇಟಿಯಾಗಿದ್ದರು. ಪುನೀತ್ ಪತ್ನಿ ಅಶ್ವಿನಿ ಅಜ್ಜಿ ಸುಮಿತ್ರಾಗೆ ಸೀರೆ ಕೊಟ್ಟಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿ ಇಂದಿಗೆ 11 ದಿನ. ಪುನೀತ್ ಮರಣ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ನಷ್ಟ ಉಂಟಾಗಿದೆ. ಅಭಿಮಾನಿಗಳು ಪ್ರತಿದಿನ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪು ಸಮಾಧಿ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಪುನೀತ್ ಇನ್ನಿಲ್ಲ ಅಂತ ಯೋಚಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಂದು 11ನೇ ದಿನ ಕಾರ್ಯ ಇದ್ದಿದ್ದರಿಂದ ಅಪ್ಪು ಕುಟುಂಬಸ್ಥರು ಪುನೀತ್ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ತುಮಕೂರು ಜಿಲ್ಲೆ ಗುಬ್ಬಿಯಿಂದ ಸುಮಿತ್ರಾ ಬಾಯಿ ಎಂಬ ಅಜ್ಜಿ ಆಗಮಿಸಿದ್ದಾರೆ. ಈ ವೇಳೆ ಪುನೀತ್ ಸಮಾಧಿಗೆ ಕಡ್ಲೆಪುರಿ ಹಾರವನ್ನು ಅಜ್ಜಿ ತಂದಿದ್ದಾರೆ. ಸುಮಿತ್ರಾ ಬಾಯಿ ಪುನೀತ್​ರನ್ನ ಹಲವು ಬಾರಿ ಭೇಟಿಯಾಗಿದ್ದರು. ಪುನೀತ್ ಪತ್ನಿ ಅಶ್ವಿನಿ ಅಜ್ಜಿ ಸುಮಿತ್ರಾಗೆ ಸೀರೆ ಕೊಟ್ಟಿದ್ದರು. ಇದೀಗ ಅಪ್ಪು ನಿಧನರಾಗಿರುವ ಕಾರಣ ಅಜ್ಜಿ ತಾವೇ ಸ್ವತಃ ಕಡ್ಲೆಪುರಿ ಪೋಣಿಸಿ ಹಾರ ತಂದಿದ್ದಾರೆ.