ನಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆ ಅನುಭವಿಸುವುದು ವ್ಯಕ್ತಿತ್ವದ ನೆಗೆಟಿವ್ ಅಂಶ: ಡಾ ಸೌಜನ್ಯ ವಶಿಷ್ಠ

ನಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆ ಅನುಭವಿಸುವುದು ವ್ಯಕ್ತಿತ್ವದ ನೆಗೆಟಿವ್ ಅಂಶ: ಡಾ ಸೌಜನ್ಯ ವಶಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 08, 2021 | 4:12 PM

ಐ ಯಾಮ್ ಮೋರ್ ದ್ಯಾನ್ ಇನಫ್, ನನಗೆ ಯಾರೂ ಸರಿಸಾಟಿಯಿಲ್ಲ. ನನಗೆ ನನ್ನದೇ ಆದ ರೂಪವಿದೆ ಮತ್ತು ವ್ಯಕ್ತಿತ್ವ ಇದೆ ಅನ್ನೋದು ನಮ್ಮ ಮಂತ್ರವಾಗಿರಬೇಕು ಎಂದು ಸೌಜನ್ಯ ಹೇಳುತ್ತಾರೆ.

ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ನಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿಕೊಳ್ಳುವ ಬಗ್ಗೆ ಮಾತಾಡಿದ್ದಾರೆ. ನಮ್ಮ ಬಗ್ಗೆ ನಮ್ಮಲ್ಲಿ ಆತ್ಮವಿಶ್ವಾಸ ಇಲ್ಲದಿರೋದೆ ಕೀಳರಿಮೆ. ಇದು ನಮ್ಮ ವ್ಯಕ್ತಿತ್ವವದ ಬಹಳ ದೊಡ್ಡ ನೆಗೆಟಿವ್ ಅಂಶ ಎಂದು ಅವರು ಹೇಳುತ್ತಾರೆ. ನಮ್ಮಲ್ಲಿನ ದೌರ್ಬಲ್ಯವೆಂದರೆ, ಬೇರೆಯವರನ್ನು ಮೆಚ್ಚಿಸಲು ಪ್ರಯತ್ನಿಸುವುದು. ನನ್ನ ರೂಪ, ಮೈಬಣ್ಣ ಚೆನ್ನಾಗಿಲ್ಲ, ನಾನು ಅವನಷ್ಟು ಅಥವಾ ಅವಳಷ್ಟು ಬೆಳ್ಳಗಿಲ್ಲ, ಕುಳ್ಳಕ್ಕಿದ್ದೇನೆ, ದಪ್ಪ ಇದ್ದೇನೆ ಅಂತ ನಾವು ವಿನಾಕಾರಣ ಕೊರಗುತ್ತೇವೆ. ಹಾಗಾಗೇ, ನಾವು ಹೇಗಿರುವೆವೋ ಹಾಗೆ ನಮ್ಮನ್ನು ನಾವು ಅಂಗೀಕಾರ ಮಾಡಿಕೊಳ್ಳಬೇಕು, ನಾವು ಜೀವಿಸೋದು ನಮಗಾಗಿ ಬೇರೆಯವರಿಗಾಗಿ ಅಲ್ಲವೆನ್ನುವ ಅಂಶವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ.

ಯಾವ ರೀತಿಯಾಗಿ ಒಂದು ಚಿಕ್ಕ ಮಗುವಿನಲ್ಲಿ fear of judgement ಇರುವುದಿಲ್ಲವೋ ನಮ್ಮಲ್ಲೂ ಅಂಥ ಮನೋಭಾವ ಇರಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ. Fear of judgement ಇದ್ದರೆ ನಮ್ಮಲ್ಲಿ ಆತ್ಮವಿಶ್ವಾಸ ಹುಟ್ಟಿಕೊಳ್ಳವುದಿಲ್ಲ. ಬೇರೆಯವರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವ ಆಗತ್ಯವೇ ಇಲ್ಲ. ಬೇರೆಯವರ ಬದುಕಿನಲ್ಲಿರುವ ಪೊಳ್ಳುತನ ನಮ್ಮ ಗಮನಕ್ಕೆ ಬರೋದಿಲ್ಲ. ಹಾಗಾಗೇ, ಐ ಯಾಮ್ ಮೋರ್ ದ್ಯಾನ್ ಇನಫ್, ನನಗೆ ಯಾರೂ ಸರಿಸಾಟಿಯಿಲ್ಲ. ನನಗೆ ನನ್ನದೇ ಆದ ರೂಪವಿದೆ ಮತ್ತು ವ್ಯಕ್ತಿತ್ವ ಇದೆ ಅನ್ನೋದು ನಮ್ಮ ಮಂತ್ರವಾಗಿರಬೇಕು ಎಂದು ಸೌಜನ್ಯ ಹೇಳುತ್ತಾರೆ.

ನಮ್ಮಲ್ಲಿ ಸಕಾರಾತ್ಮಕ ಧೋರಣೆ ಬೆಳೆಯಬೇಕಾದರೆ, ಒಂದಷ್ಟು ಟ್ರಿಕ್ ಗಳನ್ನು ಪಾಲಿಸಬೇಕು ಇಲ್ಲವೇ ಅಳವಡಿಸಿಕೊಳ್ಳಬೇಕು. ಸರಿಯಾದ ನಿದ್ರೆ, ಒಳ್ಳೆ ಆಹಾರ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದರ ಜೊತೆಗೆ ಒಂದಷ್ಟು ಸಮಯವನ್ನು ಮೆಡಿಟೇಶನ್ನಲ್ಲಿ ಕಳೆಯಬೇಕು. ಎಲ್ಲಕ್ಕೂ ಮಿಗಿಲಾಗಿ ನಮ್ಮ ಆರೋಗ್ಯದ ಮೇಲೆ ಕಾಳಜಿ ಇರಬೇಕು ಎಂದು ಸೌಜನ್ಯ ಹೇಳುತ್ತಾರೆ.

ನಮ್ಮ ಇಮೇಜ್ ಗಳನ್ನು ಸೋಷಿಯಲ್ ಮಿಡಿಯಾನಲ್ಲಿ ಅಪ್ಲೋಡ್ ಮಾಡಲು ಮತ್ತು ಕಾನ್ಫರೆನ್ಸ್ ಕಾಲ್​ನಲ್ಲಿ ಪಾಲ್ಗೊಳ್ಳಲು ಯಾವುದೇ ಹಿಂಜರಿಕೆ ಬೇಡ ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ:  Digital Payments: ಡಿಜಿಟಲ್ ಪಾವತಿ ಜನಪ್ರಿಯತೆಗೆ ಆಸಕ್ತಿಕರವಾದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ